ಕಡಬದಲ್ಲಿ ಕೊರೋನಾಗೆ ಮತ್ತೊಂದು ಬಲಿ !
ಕೊರೋನಾ ಸೋಂಕು ಕಡಬದಲ್ಲಿ ಹೆಚ್ಚುತ್ತಿದ್ದು ಇದೀಗ ಶೋಕಿಗೆ ಓರ್ವ ಬಲಿಯಾಗಿದ್ದಾನೆ. ಕಡಬ ತಾಲೂಕಿನ ಮರ್ದಾಳದ ವ್ಯಕ್ತಿಯೊಬ್ಬರು ಕೋವಿಡ್ ನಿಂದ ಮೃತ ಪಟ್ಟಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಸದರಿ ಮೃತಪಟ್ಟ ವ್ಯಕ್ತಿ ಕಡಬ ತಾಲೂಕಿನ ಮರ್ದಾಳದ 102 ನೆಕ್ಕಿಲಾಡಿ ಗ್ರಾಮದ ವಾಸಿ. 67 ವರ್ಷದ ಕುಂಜತ್ತೋಡಿ ನಿವಾಸಿಯಾಗಿರುವ ಇವರು ಸೋಮವಾರ ರಾತ್ರಿ ಕೊರೋನಾದಿಂದ ತೀರಿಕೊಂಡಿದ್ದಾರೆ.
ಈತ ಕಡಬದ ಮಿಲ್ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ರೋಗಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈಂಕನ್ ಮಾಡಲಾಗಿತ್ತು. ಆ ನಂತರ ಅವರ ಅನಾರೋಗ್ಯ ಉಲ್ಬಣಿಸಿದ ಹಿನ್ನೆಲೆಯಲ್ಲಿ ಅವರನ್ನು 3 ದಿನಗಳ ಹಿಂದೆ ಮಂಗಳೂರಿನ ವೆಸ್ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.