ಈ ದೇಶದಲ್ಲಿ ಇಲ್ಲಿಯತನಕ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ | ಆ ದೇಶ ಯಾವುದು ಗೊತ್ತಾ..?!
ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಟ ಆಡಿಸುತ್ತಿರುವ ಕೋರೋನಾ ಯಾಕೆ ಒಂದು ದೇಶಕ್ಕೆ ಇನ್ನೂ ಕೊಟ್ಟಿಲ್ಲ ಎಂಟ್ರಿ.
‘ ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ‘ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.
ಇಡೀ ಜಗತ್ತೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಪರದಾಡುತ್ತಿದ್ದರೆ, ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲದೆ ನೆಮ್ಮದಿಯಾಗಿ ಇದೆ. ನೀವು ಈ ಸುದ್ದಿಯನ್ನು ನಂಬದೇ ಇರಲು ಸಾಧ್ಯವಿದೆ. ಕಾರಣ ಯಾರದ್ದು ಕೋರೋಣ ಸೋಂಕಿತರು ಇಲ್ಲದೆ ಇರುವ ರಾಷ್ಟ್ರ ಉತ್ತರ ಕೊರಿಯಾ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ.
ಏಪ್ರಿಲ್ ನಿಂದ ಮೊದಲ್ಗೊಂಡು ಈವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ಒಬ್ಬೇ ಒಬ್ಬ ಸೋಂಕಿತ ಪತ್ತೆಯಾಗಿಲ್ಲ. ಏಪ್ರಿಲ್ 23-29 ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಅಥವಾ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೋನಾ ಸೋಂಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.
ಉತ್ತರ ಕೊರಿಯಾ ಮೇಲೆ ಅನುಮಾನ
ನಮ್ಮಲ್ಲಿ ಒಂದೇ ಒಂದು ಕೊರೋನಾ ಸೋಂಕು ಇಲ್ಲ ಎಂಬ ಉತ್ತರ ಕೊರಿಯಾದ ಮಾಹಿತಿಯನ್ನು ಜಗತ್ತು ನಂಬಲು ವಿಶ್ವಸಂಸ್ಥೆ ಸುತಾರಾo ಸಿದ್ಧವಿಲ್ಲ. ಇಡೀ ಜಗತ್ತು ಉತ್ತರ ಕೊರಿಯಾವನ್ನು ಅನುಮಾನದಿಂದ ನೋಡುತ್ತಿದೆ. ಉತ್ತರ ಕೊರಿಯಾ ತನ್ನ ನೆರೆಯ ರಾಷ್ಟ್ರವಾದ ಚೀನಾದೊಂದಿಗೆ ಆರೋಗ್ಯ ಮೂಲಸೌಕರ್ಯ ಹಂಚಿಕೊಂಡಿದೆ. ಜಗತ್ತಿನಲ್ಲಿ ಮೊದಲು ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದೇ ಚೀನಾದಲ್ಲಿ. ನಂತರ ಗಡಿ ಎಲ್ಲೆಗಳನ್ನು ದಾಟಿ ಕೋರೋನಾ ವಿಶ್ವವ್ಯಾಪಿ ಆಗಿರುವುದು ಈಗ ವಾಸ್ತವ. ಹೀಗಿರುವಾಗ ಉತ್ತರ ಕೊರಿಯಾದಲ್ಲಿ ಸೋಂಕಿತರೇ ಇಲ್ಲ ಎಂಬ ಕಿಮ್ ಜಾಂಗ್ ಉನ್ ಸರ್ಕಾರದ ಹೇಳಿಕೆ ಅನುಮಾನಕ್ಕೀಡಾಗಿದೆ.
ಇನ್ನು ಜಗತ್ತಿನಲ್ಲಿ ಕೊವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಉತ್ತರ ಕೊರಿಯಾ ವಿದೇಶಗರಿಗೆ ತನ್ನ ದೇಶದ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೆ ಪ್ರವಾಸೋದ್ಯಮ ಬಂದ್ ಮಾಡಿತ್ತು. ಅಲ್ಲದೆ ಈ ಹಿಂದೆ ರೋಗಲಕ್ಷಣಗಳಿರುವ ತನ್ನದೇ ದೇಶದ ಪ್ರಜೆಗಳನ್ನೂ ಕೂಡ ದೇಶ ಪ್ರವೇಶಕ್ಕೆ ಸರ್ವಾಧಿಕಾರಿ ಸರ್ಕಾರ ನಿರ್ಬಂಧ ಹೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.