ಮಂಗಳೂರು | ವರ್ಕ್ ಫ್ರಂ ಹೋಂನಲ್ಲಿ ಕೆಲಸಮಾಡುತ್ತಿದ್ದ ಐಟಿ ಉದ್ಯೋಗಿ ಹಠಾತ್ ಸಾವು
ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಆಫೀಸ್ ಕೆಲಸ ನಿರ್ವಹಿಸುತ್ತಿದ್ದ ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿ ಶ್ರೀಕಾಂತ್ ಪ್ರಭು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಲಾಕ್ ಡೌನ್ ಬಳಿಕ ಮನೆಯಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇವರು ಮಂಗಳೂರು ಉಳ್ಳಾಲದ ಚೀರುಂಭ ಭಗವತಿ ಕ್ಷೇತ್ರದ ವಾಸುದೇವ ಪ್ರಭು ಹಾಗೂ ತಾರಾಮತಿ ದಂಪತಿಯ ಎರಡನೇ ಪುತ್ರ.
ಶ್ರೀಕಾಂತ್ ಪ್ರಭು ವಿವಾಹಿತರಾಗಿದ್ದು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.