ಪುತ್ತೂರು | ಬೊಳ್ವಾರು ಮಟನ್ ಸ್ಟಾಲ್ ನ ಮುಂದೆ 60 ಮೀಟರ್ ಉದ್ದದ ಕ್ಯೂ

ರಾಜ್ಯಾದ್ಯಂತ ಲಾಕ್ ಡೌನ್‌ ಇರುವುದರಿಂದ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ, ಬೆಳಗಿನ ಹೊತ್ತು ಇಡೀ ರಾಜ್ಯದ ಹೆಚ್ಚಿನ ಎಲ್ಲಾ ಪೇಟೆ ಪಟ್ಟಣಗಳು ಬ್ಯುಸಿ ಇರುತ್ತವೆ. ನಮ್ಮ ಜಿಲ್ಲೆ ಕೂಡ ಅದಕ್ಕೆ ಹೊರತಲ್ಲ.
ಕೋಳಿ ಮೀನು ಮಾರುಕಟ್ಟೆಗಳ ಮುಂದೆ ಕೂಡ ತುಂಬಾ ರಶ್ ಕಂಡುಬರುತ್ತಿರುವುದು ಸಾಮಾನ್ಯ.

ಆದರೆ ಇವತ್ತು ಪುತ್ತೂರಿನ ಬೋಲ್ವಾರ್ ಮಟನ್ ಸ್ಟಾಲಿನ ಮುಂದೆ ವಿಶೇಷವಾದ ರೀತಿಯಲ್ಲಿ ಜನ ನಿಂತಿದ್ದರು. ಅಲ್ಲಿ ಮಟನ್ ಖರೀದಿಸಲು ಸುಮಾರು 60 ಮೀಟರ್ ಉದ್ದದ ಕ್ಯೂ ಕಂಡುಬಂದಿದೆ.

ಮುಸ್ಲಿಮರ ರಂಜಾನ್‌ ಹಬ್ಬ ಸನ್ನಿಹಿತವಾದ ಕಾರಣ ಇಂದು, ಮೇ.11ರಂದು ಬೊಳ್ವಾರಿನ ಮಟನ್ ಸ್ಟಾಲ್‌ ನಲ್ಲಿ ಜನರು ಮುಗಿಬಿದ್ದಿದ್ದಾರೆ. ಆದರೆ ಎಲ್ಲರೂ ಸರದಿ ಸಾಲಿನಲ್ಲಿ ಬಂದು ನಿಂತು, ನಿಯತ್ತಾಗಿ ಮಾಸ್ಕ್ ಧರಿಸಿ ತಮ್ಮ ಇಷ್ಟದ ತೊಡೆಮಾಂಸ, ಲೈನ್, ಕಾಲು, ತಲೆ ಮಾಂಸ ಹೀಗೆ ಖರೀದಿಸುತ್ತಿದ್ದಾರೆ. 

Leave A Reply

Your email address will not be published.