ಸವಣೂರು : ಅವಧಿ ಮೀರಿ ವ್ಯಾಪಾರ | ಅಂಗಡಿಗಳಿಗೆ ದಂಡ ವಿಧಿಸಿದ ಗ್ರಾ.ಪಂ,ಮಾಸ್ಕ್ ಹಾಕದವರಿಗೂ ದಂಡ

    

 

ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್‌ಡೌನ್ ನಲ್ಲಿ ಬೆಳಗ್ಗಿನಿಂದಲೇ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಅದಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದ್ದು,ಆದರೂ ಕೆಲವೆಡೆ ಅವಧಿ ಮೀರಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಸವಣೂರು ಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ ಸವಣೂರು ಗ್ರಾ.ಪಂ ಹಾಗೂ ಪೊಲೀಸರು ಅಂಗಡಿಗಳಿಗೆ ದಂಡ ವಿಧಿಸಿದರು,ಜತೆಗೆ ಮಾಸ್ಕ್ ಹಾಕದವರಿಗೂ ದಂಡ ಹಾಕಲಾಯಿತು.

ಇತ್ತ ಪಾಲ್ತಾಡಿ ಗ್ರಾಮದಲ್ಲೂ ಕಾರ್ಯಾಚರಣೆ ನಡೆಸಿದ ಗ್ರಾ.ಪಂ.ತಂಡ ಅಂಕತ್ತಡ್ಕದಲ್ಲಿ ಅವಧಿ ಮೀರಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಿದರು.

ಈ ಸಂದರ್ಭ ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್,ದಯಾನಂದ‌ ಮಾಲೆತ್ತಾರು ಹಾಗೂ ಪೊಲೀಸರು ಪಾಲ್ಗೊಂಡಿದ್ದರು.

Leave A Reply

Your email address will not be published.