ಪುತ್ತೂರು ಕೋವಿಡ್ ರೂಲ್ಸ್ ಬ್ರೇಕ್ | ಹಲವು ವಾಹನಗಳ ಮುಟ್ಟುಗೋಲು ,ಅನಗತ್ಯ ತಿರುಗಾಟಕ್ಕೆ ಪೊಲೀಸ್ ತಡೆ
ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್ಡೌನ್ ನಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಅನಗತ್ಯ ವಾಹನಗಳಿಗೆ ಕಡಿವಾಣ ಹಾಕಿ ಹಲವು ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ದರ್ಬೆ, ಮಂಜಲ್ಪಡ್ಪು, ನೆಹರುನಗರದಲ್ಲಿ ಮುಖ್ಯರಸ್ತೆ ಸಂಪರ್ಕವಾಗುವಲ್ಲಿ ಭಾರಿ ವಾಹನ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿದಲ್ಲದೆ.
ಕೆಲವು ವಾಹನಗಳಿಂದ ತಾವೇ ಕೀ ಎಳೆದು ವಾಹನಗಳ ಮಾಲಕರಿಗೆ ದಂಡ ವಿಧಿಸಿದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋಪಾಲ್ ನಾಯ್ಕ್, ಎಸ್.ಐ ಜಂಬೂರಾಜ್ ಮಹಾಜನ್ ಹಾಗೂ ಸಿಬಂದಿಗಳು ದರ್ಬೆಯಲ್ಲಿ ವಾಹನ ತಪಾಸಣೆ ನಡೆಸಿದರು.
ಕಬಕ ಚೆಕ್ ಪೋಸ್ಟ್ ನಲ್ಲಿಯೂ ಕೂಡಾ ಬೆಳಿಗ್ಗೆ 6.30 ರಿಂದಲೇ ತಪಾಸಣೆ ಆರಂಭಗೊಂಡಿದೆ. ವಾಹನ ದಟ್ಟಣೆ ಹೆಚ್ಚಿದ್ದು ಹಲವು ವಾಹನ ಗಳನ್ನು ಪೊಲೀಸರು ಹಿಂದಕ್ಕೆ ಕಳುಹಿಸಿರುವುದು ಕಂಡು ಬಂದಿದೆ.