ಮಮತೆಯ ಕರುಳ ಬಳ್ಳಿ ಅಮ್ಮ | ಅಮ್ಮಂದಿರ ದಿನದ ಶುಭಾಶಯಗಳು !
ಸವಿ ಸವಿ ನೆನಪಿನ ದೇವತೆಯೇ ಅಮ್ಮ.... ನೆನಪಿನ ಅಂಚಿನಲ್ಲಿ ನೋವು ನಲಿವುಗಳ ಮಧ್ಯೆಯು ಸೈ ಎನ್ನುವ ಮಮತೆಯ ಕಡಲ ಕರುಳ ಬಳ್ಳಿ. ಪ್ರೀತಿಯ ಸಂಕೇತ ಅಮ್ಮ. ಭೂಮಿ ತಾಯಿಯ ಹಾಗೇ ನಮ್ಮ ಬಾಳಿಗೆ ಹೊಸ ಬೆಳಕನ್ನು ನೀಡುವ ಮಮತಾಮಯಿ. ದೇವರ ಇನ್ನೊಂದು ರೂಪವೇ ತಾಯಿ. ಯಾವ ಸಡಗರ ಸಂದರ್ಭದಲ್ಲೂ ತನ್ನ ಮಕ್ಕಳ ನೆನಪುಗಳನ್ನು ನೆನಪು ಮಾಡುತ್ತ ಇರುವರೆ ತಾಯಿ. ದುಃಖದ ಸಮಯದಲ್ಲೂ ತನ್ನ ನೋವನ್ನು ಮರೆಸಿಕೊಂಡು ಮಕ್ಕಳ ಬಗ್ಗೆ ಚಿಂತಿಸುವ ಮಾಯೆ ಎಂದರೆ ತಾಯಿ.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಅಪಾರವಾಗಿದೆ. ತನ್ನ ಪ್ರಪಂಚ ತನ್ನ ಮಕ್ಕಳೇ ಎಂದು ಹೇಳುವ ಕರುಣಾಮಯಿ ತಾಯಿ. ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯ ಹಾಗೂ ಮಮತೆಯಿಂದ ನೋಡಿಕೊಳ್ಳುವ ಜೀವವೇ ಅಮ್ಮ. ಒಂದು ಮಗುವಿಗೆ ಸೊಲ್ಪ ಆರೋಗ್ಯದಲ್ಲಿ ಸಮಸ್ಯೆ ಬಂದಿದೆ ಎಂದು ಗೊತ್ತಾದರೆ ಸಾಕು ತಕ್ಷಣವೇ ಉಪಚರಿಸಿಕೊಂಡು ಔಷದಿಗಳನ್ನು ನೀಡುವಳು. ಆದರೆ ತನ್ನ ಆರೋಗ್ಯದ ಬಗ್ಗೆ ಚಿಂತೆ ಮಾಡದೇ ತನ್ನ ಮನೆಯವರ ಹಾಗೂ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿ ವಹಿಸುವಳು.
ತಾಯಿಯು ಮಕ್ಕಳಿಗೋಸ್ಕರ ಪ್ರೀತಿಯನ್ನೇ ತ್ಯಾಗ ಮಾಡುವರು. ತಾಯಿಯ ಕನಸು ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿ, ಮುಂದೆ ಒಂದು ಒಳ್ಳೆಯ ಉದ್ಯೋಗದಲ್ಲಿ ತೊಡಗಿಸಿಕೊಂಡು ಅವರ ಭವಿಷ್ಯದಲ್ಲಿ ಏನಾದರು ಸಾಧನೆ ಮಾಡಲಿ ಎಂದು ಆಶಿಸುತ್ತಾರೆ. ಪ್ರತಿಯೊಂದು ತಾಯಿಗೂ ಅವರದೇ ಆದ ಕನಸುಗಳು ಇರುತ್ತದೆ. ಆದರೆ ತನ್ನ ಕನಸಿನ ಬಗ್ಗೆ ಚಿಂತಿಸದೆ ತನ್ನ ಮಕ್ಕಳ ಕನಸಿನ ಚಿಂತೆಯಲ್ಲಿರುವರು.
ಒಂದು ಸಣ್ಣ ಮಗು ಅಂಬೆಗಾಲಿಡುವಲ್ಲಿಂದ ಬೆಳೆದು ನಿಲ್ಲುವವರೆಗೆ ಮಕ್ಕಳ ಪೋಷನೆಯಲ್ಲೇ ಇರುತ್ತಾರೆ. ತನಗೆ ಎಷ್ಟು ಕೆಲಸಗಳು ಇದ್ದರೂ ಮಕ್ಕಳ ಜೊತೆ ಕಳೆಯುವ ಸಮಯಕ್ಕೆ ಬೇರೆ ಸಮಯವನ್ನು ಮೀಸಲಿಟ್ಟು ಈಕೆ ಮಕ್ಕಳ ಜೊತೆ ಒಂದಿಷ್ಟು ಸಮಯವನ್ನು ನೀಡಿ ಮತ್ತೆ ಕೆಲಸದಲ್ಲಿ ಮಗ್ನಳಾಗುವರು.
ತಾಯಿಗೆ ತನ್ನ ಪ್ರಪಂಚ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಇರುವದೇ ಈಕೆಯ ಪ್ರಪಂಚವಾಗಿದೆ. ಒಂದು ತಾಯಿ ಆದವರಿಗೆ ಎಷ್ಟು ಕಷ್ಟಗಳು ಇದೇ ಎಂದರೆ ಅದನ್ನು ಅನುಭವಿಸಿಯೇ ಗೊತ್ತಿರಬೇಕು. ಯಾಕೆಂದರೆ ನೋಡಿ ಕಲಿಯುವುದಕ್ಕೂ ಮಾಡಿ ಕಲಿಯುವುದಕ್ಕೂ ತುಂಬಾ ವ್ಯತ್ಯಾಸ ಇದೇ ಹಾಗೆಯೇ ತಾಯಿ ಜೀವನವು ತುಂಬಾ ಕಷ್ಟವಿದೆ. ಒಂದು ತಾಯಿ ಆದವರಿಗೆ ಅನುಭವಗಳು ಹೆಚ್ಚು ಇರುತ್ತದೆ. ನೋವುಗಳ ಜೊತೆ ಹೋರಾಡಿ ಬದುಕಿ ಉಳಿಯುವಷ್ಟರ ಮಟ್ಟಿಗೆ ಆಕೆಯ ಜೀವನವು ಕ್ಲಿಷ್ಟಕರವಾಗಿದೆ.
ಅಮ್ಮ ಎನ್ನುವ ಪದದಲ್ಲೇ ಅಡಗಿದೆ ಆಕೆಯ ಪ್ರೀತಿ, ವಾತ್ಸಲ್ಯ, ಮಮತೆಯ ಕರುಳ ಬಳ್ಳಿ. ಅಮ್ಮಂದಿರ ದಿನವೂ ಒಂದೇ ದಿನಕ್ಕೆ ಸೀಮಿತ ಅಲ್ಲ. ಪ್ರತಿದಿನವು ಅಮ್ಮಂದಿರ ದಿನವೇ. ಪ್ರತಿ ದಿನವು ಆಕೆಯ ಕಷ್ಟ ನೋವುಗಳನ್ನು ನೋಡಿಕೊಂಡು ಪ್ರೀತಿಯಿಂದ ತಾಯಿಗೆ ಸಹಾಯ ಮಾಡುವ ತಾಯಿಯ ಜೊತೆಗೆ ನಾವುಗಳು ಕೈ ಜೋಡಿಸಿ, ಪ್ರತಿದಿನಲೂ ಆಕೆಯನ್ನು ಪ್ರೀತಿಸುವ.
ರಸಿಕಾ ಮುರುಳ್ಯ
ದ್ವಿತೀಯ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ಪುತ್ತೂರು.