ಕೊವಿಡ್ 19 ಮಾರ್ಗಸೂಚಿ ಉಲ್ಲಂಘನೆ | ದ.ಕ.ಜಿಲ್ಲೆಯಲ್ಲಿ 552 ವಾಹನಗಳು ವಶ, 1,340 ಜನರಿಗೆ ದಂಡ
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 29 ಕೇಸು ದಾಖಲಿಸಲಾಗಿದೆ. ಅಲ್ಲದೆ 1,340 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 552 ವಾಹನ ವಶಪಡಿಸಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 23, ಮಾಸ್ಕ್ ಉಲ್ಲಂಘನೆ 946 ಕೇಸ್, ರಾಷ್ಟ್ರೀಯ ವಿಪತ್ತು ಉಲ್ಲಂಘನೆ 35 ಮತ್ತು 401 ದ್ವಿಚಕ್ರ, 11 ತ್ರಿಚಕ್ರ, 40 ನಾಲ್ಕು ಚಕ್ರದ ವಾಹನ ಸಹಿತ 452 ವಾಹನ ವಶಪಡಿಸಲಾಗಿದೆ.
ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ 6 ಕೇಸ್, ಮಾಸ್ಕ್ ಉಲ್ಲಂಘನೆಯ 394 ಪ್ರಕರಣ ದಾಖಲಿಸಲಾ ಗಿದೆ. 100 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.