ದಕ್ಷಿಣಕನ್ನಡ ಮತ್ತು ರಾಜ್ಯದ ಶುಕ್ರವಾರದ ಕೊರೋನಾ ಅಪ್ಡೇಟ್

ರಾಜ್ಯದಲ್ಲಿ ನಿನ್ನೆ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಜನತಾ ಕರ್ಫ್ಯೂನಿಂದ ಏನೂ ಉಪಯೋಗ ಆಗಿಲ್ಲ. 

ಕಳೆದ 24 ಗಂಟೆಯಲ್ಲಿ 48,781 ಮಂದಿಗೆ ಸೋಂಕು ತಗುಲಿದ್ದು, ದಾಖಲೆಯ 592 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 18,58,885 ಕ್ಕೆ ಏರಿದೆ. ಸಾವನ್ನಪ್ಪಿದವರ ಸಂಖ್ಯೆ 17,804   ಏರಿಕೆಯಾಗಿದೆ.

ಇಂದು 28,623 ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 12,84,420 ಕ್ಕೆ ತಲುಪಿದೆ. ಒಟ್ಟು 5,36,641 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ಕೋರೋನಾ ಅಪ್ಡೇಟ್

ಬೆಂಗಳೂರಿನಲ್ಲಿ 21,376 ಜನರಿಗೆ ಸೋಂಕು ತಗುಲಿದ್ದು, 346 ಮಂದಿ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೊರೋನಾ ಅಪ್ಡೇಟ್

ದ.ಕ. ಜಿಲ್ಲೆಯಲ್ಲಿ, ನಿನ್ನೆ, ಮೇ.7ರ ಶುಕ್ರವಾರ 1,633 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 53,169 ಕ್ಕೆ ಏರಿಕೆಯಾಗಿದೆ. ಒಟ್ಟು 911 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 41,428 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿನಿಂದ 7 ಜನ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 778 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

Leave A Reply

Your email address will not be published.