ಸರ್ಕಾರದಿಂದ ಮತ್ತೆ ಪರಿಷ್ಕೃತ ಲಾಕ್ ಡೌನ್ ಆದೇಶ | ಮದುವೆಯಲ್ಲಿ ಇನ್ನು ಎಷ್ಟು ಜನ ಮಾತ್ರ ಭಾಗವಹಿಸಬಹುದು ಗೊತ್ತಾ ?!

ಇತ್ತ ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಕೂಡ ಕರಡಿಯಂತೆ ಆಡುತ್ತಿದೆ. ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೀಡು ಮಾಡಿ ಸಾರ್ವಜನಿಕರಿಗೆ ಪರಚಿತ್ತಿದೆ

ಈಗಾಗಲೇ ಸೋಮವಾರದಿಂದ 14 ದಿನಗಳ ಕಾಲ ಲಾಕ್ ಡೌನ್ ಎಂದು ಘೋಷಿಸಿರುವ ಸರ್ಕಾರ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿತ್ತು. ಆದರೆ ಇದೀಗ ಈ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಇಂದು ಮತ್ತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಿದ್ದ ಸರ್ಕಾರ, ಈ ಬಾರಿ ಅದರ ಮಿತಿಯನ್ನು ಇಳಿಕೆ ಮಾಡಿದೆ. ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ತಮ್ಮ ತಮ್ಮ ಮನೆಗಳಲ್ಲೇ ಮದುವೆ ಕಾರ್ಯಕ್ರಮ ಮುಗಿಸಬೇಕು. ಹಿಂದೆ ಇದ್ದಂತಹ ನಿಯಮದಂತೆ ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು ಎಂದಿದೆ. ಕೇವಲ 10 ಜನರನ್ನು ಕಮ್ಮಿ ಮಾಡಿದ ಕೂಡಲೇ ಕೊರೋನಾ ಹರಡಲ್ಲವೆ ?! ರೂಲ್ಸ್ ಮಾಡಿದವರಿಗೆ ಮಾತ್ರ ಗೊತ್ತು.

ಕಬ್ಬಿಣದ ಅದಿರು ಗಣಿಗಾರಿಕೆಗೆ ಹಾಗೂ ಸಿಮೆಂಟ್ ಗೆ ಬಳಸುವ ಲೈಮ್ ಸ್ಟೋನ್ ತಯಾರಿಕೆಗೆ ಪರಿಷ್ಕೃತ ಆದೇಶದಲ್ಲಿ ಅನುಮತಿ ನೀಡಲಾಗಿದೆ. ಇನ್ನುಳಿದಂತೆ ಹಳೆಯ ಆದೇಶಗಳೇ ಮುಂದುವರಿಯಲಿದೆ. 

Leave A Reply

Your email address will not be published.