ಕೊರೋನಾ ವಿರುದ್ಧ ಹೋರಾಡಲು ಮತ್ತೊಂದು ಆಯುಧ ಸಿಕ್ಕಿದೆ | ಡ್ರಗ್ ಕಂಟ್ರೋಲರ್ ನಿಂದ 2 DG ಡ್ರಗ್ ಗೆ ಅನುಮತಿ
ಕೊರೋನಾ ವಿರುದ್ಧ ಮತ್ತೊಂದು ಆಯುಧ ನಮಗೆ ಸಿಕ್ಕಿದೆ. ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಡಿಆರ್ ಡಿ ಒ ಅಭಿವೃದ್ಧಿಪಡಿಸಿರುವ 2-DG (ಡಿಯೊಕ್ಸಿ-ಡಿ ಗ್ಲೂಕೋಸ್) ಡ್ರಗ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ. ಈ ಡ್ರಗ್ ನ ಬಳಕೆಯಿಂದ ದೇಹಕ್ಕೆ ಬೇಕಾಗುವ ಮೆಡಿಕಲ್ ಆಕ್ಸಿಜನ್ ಅವಲಂಬನೆಯನ್ನು ಕಡಿಮೆಮಾಡಬಹುದು ಎಂದು ಅದು ಹೇಳಿದೆ.
ಡಿ ಆರ್ ಡಿ ಒ ಲ್ಯಾಬ್ ನಲ್ಲಿ ಈ 2-DG ಡ್ರಗ್ ಸಂಶೋಧನೆ ಮಾಡಲಾಗಿತ್ತು. ಇನ್ಸ್ ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ನಿಂದ ಹೈದರಾಬಾದ್ ನ ಡಾಕ್ಟರ್ ರೆಡ್ಡಿಸ್ ಜೊತೆಗೂಡಿ ಈ ಡ್ರಗ್ ಅಭಿವೃದ್ಧಿಪಡಿಸಲಾಗಿದ್ದು, ಈ ಡ್ರಗ್ ಆಸ್ಪತ್ರೆಗೆ ದಾಖಲಾದ ಸೋಂಕಿತರ ಶೀಘ್ರ ಚೇತರಿಕೆಗೆ ಸಹಾಯಕವಾಗಲಿದೆ ಎಂದು ಡಿ ಆರ್ ಡಿ ಒ ಹೇಳಿದೆ.
ಈಗಾಗಲೇ ಈ ಡ್ರಗ್ ಟ್ರೈನಿಂಗ್ ಟ್ರೈನ್ 3ನೇ ಹಂತ ನಲ್ಲಿದೆ. ಮೂರನೇ ಹಂತದ ಟ್ರಯಲ್ ಹಲವು ಆಸ್ಪತ್ರೆಗಳಲ್ಲಿ ನಡೆದಿದ್ದು ಅದರಿಂದ ಸಕಾರಾತ್ಮಕ ಪರಿಣಾಮಗಳು ಉಂಟಾಗಿವೆ.
ಈ ಡ್ರಗ್ ಪೌಡರ್ ರೂಪದಲ್ಲಿರಲಿದ್ದು, ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಕೇವಲ ಮೂರು ದಿನಗಳಲ್ಲಿ ಶೇ.42 ರಷ್ಟು ಆಕ್ಸಿಜನ್ ಅವಲಂಬನೆ ಕಡಿಮೆಯಾಗುತ್ತದೆ ಎಂದು ಡಿ ಆರ್ ಡಿ ಒ ತಿಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ರೋಗಿಗಳು ಬಳಲುತ್ತಿದ್ದಾರೆ. ಈ ಡ್ರಗ್ ಜೀವಕೋಶಗಳಲ್ಲಿ ವೈರಸ್ ಬೆಳೆಯುವ ವೇಗವನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ ಈ ಔಷಧವು ದೇಹದ ಸೆಲ್ ಗಳು ಬೇಡುವ ಆಮ್ಲಜನಕದ ಅಂಶದ ಅಗತ್ಯವನ್ನು ಕಮ್ಮಿ ಮಾಡುತ್ತದೆ. ಆದುದರಿಂದ ರೋಗಿಗಳಲ್ಲಿ ದೇಹದ ಆಮ್ಲಜನಕದ ಅಂಶ ಕಡಿಮೆ ಆದರೂ ರೋಗಿಯ ಆರೋಗ್ಯ ಸ್ಥಿರವಾಗಿ ಇರಬಲ್ಲದು. ಈ ಸಮಸ್ಯೆಗೆ 2-DG ಬಳಕೆ ಪರಿಹಾರವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.