ಸಾಮಾಜಿಕ ಅಂತರ,ಮಾಸ್ಕ್ ಇಲ್ಲದ ಗ್ರಾಹಕರಿಗೆ ಸರ್ವ್ |ಪುತ್ತೂರಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಸರಕಾರ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಪುತ್ತೂರು ಪೇಟೆಯಲ್ಲಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಬೊಳುವಾರಿನ ಅಲಂಕಾರ್ ವೈನ್ಸ್, ಸ್ಟೇಟ್ ಬ್ಯಾಂಕ್ ಬಳಿಯ ಸಂತೋಷ್ ವೈನ್ ಶಾಫ್, ಮೀನು ಮಾರುಕಟ್ಟೆಯ ಬಳಿಯ ಸ್ವಾಮಿ ವೈನ್ಸ್ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಎಲ್ಲಾ ವೈನ್ ಶಾಫ್‌ಗಳಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ, ಅಂಗಡಿಯ ಎದುರುಗಡೆ ಗಿರಾಕಿಗಳಿಗೆ ನಿಲ್ಲಲು ವೃತ್ತಾಕಾರದ ಗುರುತನ್ನು ಹಾಕದೇ ಬಂದ ಗಿರಾಕಿಗಳಿಗೆ ಕೈಗೆ ಹಾಕಲು ಸ್ಯಾನಿಟೈಸರ್‌ನ್ನು ನೀಡದೆ, ಅಲ್ಲದೇ ಗಿರಾಕಿಗಳು ಮುಖಕ್ಕೆ ಸರಿಯಾಗಿ ಮಾಸ್ಕ್ ನ್ನು ಹಾಕದಿದ್ದರೂ ವ್ಯಾಪಾರ ನಡೆಸಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಅಂಗಡಿಯ ಮಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಲಂಕಾರ್ ವೈನ್ಸ್‌ನ ಮಾಲಕ ಅರುಣ್ ಕುಮಾರ್ ಮತ್ತು ಸಂತೋಷ್ ವೈನ್ಸ್‌ನ ಮಾಲಕ ಸಂತೋಷ್ ಹಾಗೂ ಸ್ವಾಮಿ ವೈನ್ಸ್‌ನ ಮಾಲಕ ಕವಿತಾ ಬಾಲಚಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.