ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್
ಕೇರಳದಲ್ಲಿ ಇವತ್ತಿನಿಂದ ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.
ಇಲ್ಲಿ ತನಕ ಕೇರಳದಲ್ಲಿ ಯಾವುದೇ ಕರ್ಪ್ಯೂ ವಿಧಿಸಿರಲಿಲ್ಲ. ಇದೀಗ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂಪೂರ್ಣ ಲಾಕ್ ಡೌನ್ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಲಾಕ್ ಡೌನ್ ಮೇ 8 ರ ಬೆಳಿಗ್ಗೆ 6 ಗಂಟೆಯಿಂದ 16 ರ ವರೆಗೆ ಇರಲಿದೆ.
ಕೇರಳದಲ್ಲಿ ಸ್ಯಾಂಪಲ್ ತೆಗೆದ ಒಟ್ಟು 1,63,321 ಜನರಲ್ಲಿ 41,953 ಕೋರೋನಾ ಕೇಸ್ ಗಳು ಬಂದಿತ್ತು. ಒಂದೊಮ್ಮೆ ಕೊರೋನ ನಿಯಂತ್ರಣದಲ್ಲಿ ಕೇರಳ ರಾಜ್ಯ ಪ್ರಧಾನಿಯವರ ಪ್ರಶಂಸೆಗೆ ಒಳಪಟ್ಟಿತ್ತು.