ಬೆಳ್ತಂಗಡಿ | ಮನೆಯಲ್ಲಿ ಕೆಲಸ ಮುಗಿಸಿ ಈಜಲು ಹೋದ ಯುವಕ ನೀರು ಪಾಲು
ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೊಬ್ಬ ಹುಡುಗ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಬೇಸಿಗೆ ನಿಮಿತ್ತ ಗೆಳೆಯರೊಂದಿಗೆ ನೀರಿನಲ್ಲಿ ಈಜಾಡಲು ಹೋದ ನಾಲ್ಕೈದು ಹುಡುಗರ ತಂಡದಲ್ಲಿ ಓರ್ವ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮತಪಟ್ಟ ಹುಡುಗನನ್ನು ಕಾರ್ಯಾನ ದುಗ್ಗಪ್ಪ ಎಂಬವರ ಮಗ ನಿಶಾಂತ್ 22 ವರ್ಷ ಎಂದು ಗುರುತಿಸಲಾಗಿದೆ. ನಿಶಾಂತ್ ಅವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.
ಪಡoಗಡಿಯ ಸಮೀಪದ ಫಲ್ಗುಣಿ ನದಿಗೆ ನಾಲ್ಕೈದು ಮಂದಿ ಗೆಳೆಯರು ನೀರಿನಲ್ಲಿ ಈಜು ಹೊಡೆಯಲು ಹೋಗಿದ್ದರು. ಅದರಲ್ಲಿ ಎಲ್ಲರಿಗೂ ಚೆನ್ನಾಗಿ ಬರುತ್ತಿತ್ತು ಒಬ್ಬಾತನಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ನೀರಿನಲ್ಲಿ ಈಜುತ್ತಿರುವಾಗ ಆತನಿಗೆ ಅರ್ಧದಲ್ಲಿ ದಮ್ಮು ಕಟ್ಟಿದೆ. ಮುಂದಕ್ಕೆ ಈಜಲು ಆಗೋದಿಲ್ಲ ಅನ್ನಿಸುವಾಗ ಆತನ ಉಳಿದ ಗೆಳೆಯರು ಸಹಾಯಕ್ಕೆ ಬಂದಿದ್ದಾರೆ. ಸ್ವಲ್ಪ ದೂರ ಆತನನ್ನು ಎತ್ತಿ ತಂದಿದ್ದಾರೆ. ಆದ್ರೆ ಕೊನೆಗೆ ಜೊತೆಯಲ್ಲಿದ್ದವರಿಗೆ ಆತನನ್ನು ಎತ್ತಿಕೊಂಡು ಈಜಲು ಆಗಲಿಲ್ಲ. ಅಷ್ಟರಲ್ಲಿ ನಿಶಾಂತ್ ನೀರಿನಲ್ಲಿ ಮುಳುಗಿಬಿಟ್ಟಿದ್ದ.
ಮತ್ತೆ ಕೂಡಲೇ ಸುಧಾರಿಸಿಕೊಂಡು ಆತನ ಗೆಳೆಯರು ಆತನನ್ನು ನೀರಿನಿಂದ ಮೇಲಕ್ಕೆತ್ತಿ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಕೇವಲ 5 ನಿಮಿಷಗಳಲ್ಲಿ ‘ಖುಶಿ ಅಂಬುಲೆನ್ಸ್ ‘ನ ಚಾಲಕ ಗಣೇಶ್ ಅವರು ಸ್ಥಳಕ್ಕೆ ಆಗಮಿಸಿ ಆತನನ್ನು ಸ್ಥಳೀಯ ಬದ್ಯಾರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದುರದೃಷ್ಟವಶಾತ್ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ. ಇದೀಗ ಆತನ ಶವವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.