ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಅನಿರ್ದಿಷ್ಟ ಕಾಲದವರೆಗೆ ಸ್ಟ್ರಿಕ್ಟ್ ಲಾಕ್ ಡೌನ್ !
ದ.ಕ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಗೆ ಸೀಮಿತವಾಗಿ ಜಿಲ್ಲೆಯಲ್ಲಿ ಶುಕ್ರವಾರದಿಂದ ಮುಂದಿನ ಆದೇಶದವರೆಗೆ ಸಂಪೂರ್ಣ ಲಾಕ್ಡೌನ್ ಮಾಡಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ.
ಇದರನ್ವಯ ಅಗತ್ಯ ದಿನಸಿ ವಸ್ತುಗಳ ಮಳಿಗೆ ಬೆಳಿಗ್ಗೆ 9.00 ಗಂಟೆ ವರೆಗೆ ಮಾತ್ರ ತೆರೆದಿರಲಿದೆ.
ಜನರು ಮತ್ತು ವ್ಯಾಪಾರಸ್ಥರು 10.00 ಗಂಟೆಯೊಳಗೆ ಮನೆ ಸೇರಬೇಕಾಗಿದೆ. ಮದುವೆ, ಔತಣಕೂಟ, ಗೃಹ ಪ್ರವೇಶ, ಬರ್ತ್ ಡೇ ಪಾರ್ಟಿ ಇವುಗಳೆಲ್ಲವನ್ನೂ ನಿರ್ಬಂಧಿಸಲಾಗಿದೆ.
ಮೇ 15ರ ನಂತರ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಈಗಾಗಲೇ ಅನುಮತಿಸಿದ ಮೇ 15ರ ವರಗಿನ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಈ ಕಾರ್ಯಕ್ರಮಗಳು ನಡೆಯಬಹುದು.
ದಿನನಿತ್ಯ ಬಳಕೆಯ ದಿನಸಿ ಹಣ್ಣು-ತರಕಾರಿ ಲಭ್ಯ. ಮದ್ಯದಂಗಡಿ ಕೂಡ 6 ರಿಂದ 9 ರ ವರೆಗೆ ತೆರೆದಿರುತ್ತವೆ.
ವೀಕೆಂಡ್ ನಲ್ಲಿ ದಿನಸಿ.ಇರೋದಿಲ್ಲ. ಆದರೆ ಹಾಲು ತರಕಾರಿ ಸಿಗುತ್ತದೆ.
ಮೆಡಿಕಲ್ ಶಾಪ್ ಹೆಸರಿನಲ್ಲಿ ಜನ ವ್ಯಾಪಾರ ನಡೆಸಬಹುದು ಆದರೆ ತಿರುಗಾಡುವಂತಿಲ್ಲ. ತೀರಾ ಅಗತ್ಯದ ಮೆಡಿಸಿನ್ ಆಗಿದ್ದಲ್ಲಿ ಹತ್ತಿರದ ಮೆಡಿಕಲ್ ವರೆಗೆ ಮಾತ್ರ ಹೋಗಬಹುದು. ಆದರೆ ದಾರಿ ಮಧ್ಯ ಪೊಲೀಸರು ಉಪಸ್ಥಿತರಿದ್ದರು ಸರಿಯಾದ ಕಾರಣ ನೀಡಬೇಕು. ಇದರ ಜತೆಗೆ ಅನಗತ್ಯವಾಗಿ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕ ಇದ್ದು, ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಪೊಲೀಸ್ ಇಲಾಖೆ ಕೂಡ ಹೊಸ ನೀತಿಯನ್ನೂ ಪ್ರಕಟಿಸಿದೆ.
ಅನವಶ್ಯಕವಾಗಿ ವಾಹನ ರೋಡಿಗಿಲಿಸಿದರೆ ವಾಹನವನ್ನು ಮುಲಾಜಿಲ್ಲದೆ ಸೀಜ್ ಮಾಡಲಾಗುವುದು. ಅಗತ್ಯ ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿನಾಕಾರಣ ಜನ ಯಾವ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಅಂತರ ಪಾಲಿಸಬೇಕು.ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆ ಸ್ವತಃ ಅಂತವರು ಕೋವಿಡ್ ಪರೀಕ್ಷೆ ಕೈಗೊಳ್ಳಲು ಮುಂದೆ ಬರಬೇಕು. ರೋಗ ಹರಡದಂತೆ ಸರಕಾರವೇ ಸೂಚಿಸುವ ಕ್ವಾರೆಂಟೈನ್ ಕೇಂದ್ರಗಳಿಗೆ ಹೋಗಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.