ಧರ್ಮಸ್ಥಳ ಸಿಎ ಬ್ಯಾಂಕ್ ಸಿಇಓ ಆತ್ಮಹತ್ಯೆ | ಬ್ಯಾಂಕಿನ ಎರಡು ನಿರ್ದೇಶಕರ ವಿರುದ್ದ ಪ್ರಕರಣ ದಾಖಲು
ಧರ್ಮಸ್ಥಳ ಸೊಸೈಟಿ ಸಿಇಒ ರವೀಂದ್ರನ್ ಡಿ ಅವರು ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ನೇಣಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ ರವೀಂದ್ರನ್ ಅವರ ಪತ್ನಿ ಉಷಾ ಅವರು ನೀಡಿದ ದೂರಿನಂತೆ ಇಬ್ಬರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಸೆಕ್ಷನ್ನಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಡೆತ್ ನೋಟಿನಲ್ಲಿ ಒಟ್ಟು ಮೂರು ಜನರ ಹೆಸರನ್ನು ಅವರು ಬರೆದಿದ್ದಾರೆ. ಅವರಲ್ಲಿ ಓರ್ವ ಮಹಿಳೆಯೂ ಸೇರಿದ್ದು ಆಕೆಯ ಹೆಸರನ್ನು ಸ್ವರ್ಣಗೌರಿ ಎಂದು ಡೆತ್ ನೋಟಿನಲ್ಲಿ ಬರೆದಿದ್ದಾರೆ. ಆಕೆ ಸದರಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದು ಆಕೆಯ ಹೆಸರನ್ನು ಡೆತ್ ನೋಟ್ ನಲ್ಲಿ ಪ್ರಥಮವಾಗಿ ನಮೂದಿಸಿದ್ದಾರೆನಮೂದಿಸಿದ್ದಾರೆ.
ಬ್ಯಾಂಕಿನ ಮಾಜಿ ಅಧ್ಯಕ್ಷರ ಹಾಗೂ ಹಾಲಿ ನಿರ್ದೇಶಕರಾದ ಜಯರಾಮ ಭಂಡಾರಿ ಮತ್ತು ರಘುಚಂದ್ರ ಅವರ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ರವೀಂದ್ರನ್ ಆತ್ಮಹತ್ಯೆ ಸುದ್ದಿ ಕೇಳುತ್ತಿದ್ದಂತೆಯೇ ಇದಕ್ಕೆಲ್ಲಾ ತೀವ್ರ ಒತ್ತಡ ಮತ್ತು ಅಪಮಾನವಸೆಗಿರುವುದೇ ಕಾರಣ ಎಂದು ಮೃತರ ಪತ್ನಿ ಉಷಾ ಬಹಿರಂಗವಾಗಿಯೇ ಆರೋಪಿಸಿದ್ದರು.
ಪೂರಕ ಎಂಬಂತೆ ಮೃತರು ಬರೆದಿಟ್ಟಿದ್ದರೆನ್ನಲಾದ ಡೆತ್ನೋಟ್ ನಲ್ಲಿ ಮೂವರ ಹೆಸರು ಪ್ರಸ್ತಾಪವಾಗಿದೆ.
ಪತ್ರದಲ್ಲಿ, “ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಸ್ವರ್ಣಗೌರಿ, ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.