ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸುಗಳ ‘ರನ್’ ಅಭಿಯಾನ | ಏನಿದು ರನ್ ಅಭಿಯಾನ
ಪುತ್ತೂರು: ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಕೆಸ್ಸಾರ್ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಬಸ್ಸುಗಳು ಘಟಕದಲ್ಲಿಯೇ ನಿಲ್ಲುವುದರಿಂದ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪುತ್ತೂರು ಕೆಸ್ಸಾರ್ಟಿಸಿ ಘಟಕದಿಂದ ಪ್ರತಿದಿನ 30 ಬಸ್ಸುಗಳನ್ನು ಹೊರತೆಗೆದು ಬಸ್ಸು ನಿಲ್ದಾಣದ ತನಕ ಸಂಚರಿಸಿ ಬಳಿಕ ಮರಳಿ ಘಟಕದಲ್ಲಿ ತಂದು ನಿಲ್ಲಿಸುವಂತೆ ಆದೇಶಿಸಲಾಗಿದೆ.
ಕಳೆದ ವರ್ಷ ಮಾ.25ರಿಂದ ಲಾಕ್ಡೌನ್ ಘೋಷಣೆ ಆದ ಕಾರಣ ಮೇ.19ರ ತನಕ ಬಸ್ಸುಗಳು ಓಡಾಟ ನಡೆಸದೆ ಘಟಕದಲ್ಲಿಯೇ ಬಾಕಿಯಾಗಿದ್ದವು. ಮೇ.19ರಂದು ಸರ್ಕಾರ ಕೆಸ್ಸಾರ್ಟಿಸಿ ಬಸ್ಸುಗಳನ್ನು ಓಡಿಸಲು ಆದೇಶಿಸಿದ್ದರೂ ಬಸ್ಸುಗಳು ತಾಂತ್ರಿಕವಾಗಿ ಸಿದ್ಧಗೊಂಡಿರಲಿಲ್ಲ. ಈ ಬಾರಿ ಅಂತಹ ಸಮಸ್ಯೆಗಳು ಬಾರದಂತೆ ನಿವಾರಿಸುವ ನಿಟ್ಟಿನಲ್ಲಿ ಕೆಸ್ಸಾರ್ಟಿಸಿ ಪುತ್ತೂರು ಘಟಕದಿಂದ ಪ್ರತಿದಿನ ತಲಾ 30 ಬಸ್ಸುಗಳನ್ನು ಹೊರತೆಗೆದು ಅವುಗಳನ್ನು ಘಟಕದಿಂದ 4 ಕಿ.ಮೀ ದೂರದಲ್ಲಿರುವ ಪುತ್ತೂರು ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ತನಕ ಖಾಲಿಯಾಗಿ ಸಂಚಾರ ನಡೆಸಿ ಮತ್ತೆ ಘಟಕಕ್ಕೆ ಹಿಂದಿರುಗಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.