Ad Widget

ಪಬ್ಲಿಕ್ ಟಿವಿಯ ಖ್ಯಾತ ನಿರೂಪಕ ಅರುಣ್ ಬಡಿಗೇರ್ ಅವರ ಅಪ್ಪ-ಅಮ್ಮ ಇಬ್ಬರೂ 3 ದಿನಗಳ ಅಂತರದಲ್ಲಿ ಕೊರೋನಾ ಹೆಮ್ಮಾರಿಗೆ ಬಲಿ

ಪಬ್ಲಿಕ್ ಟಿವಿಯ ಖ್ಯಾತ ಟಿವಿ ನಿರೂಪಕ ಅರುಣ್ ಬಡಿಗೇರ್ ಅವರ ಅಪ್ಪ ಅಮ್ಮ ಇಬ್ಬರೂ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಮೂರು ದಿನಗಳ ಕೆಳಗೆ ಮೊದಲಿಗೆ ಅರುಣ್ ಬಡಿಗೇರ್ ಅವರ 53 ವರ್ಷದ ಅಮ್ಮ ಕೊರೋನಾಗೆ ಉಸಿರು ಚೆಲ್ಲಿದ್ದರು. ಅದಾಗಿ ಮೂರೇ ಮೂರು ದಿನಕ್ಕೆ ಅವರ ಅಪ್ಪ 68 ವರ್ಷ ವಯಸ್ಸಿನ ಚಂದ್ರಶೇಖರ್ ಅವರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದರು. ಇದೀಗ ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಚಂದ್ರಶೇಖರ್ ಅವರು ಅಗಲಿದ್ದಾರೆ.

ಮೂರು ದಿನಗಳ ಹಿಂದೆ ಕಳೆದ 27 ರಂದು ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ನಿಧನವಾಗಿದ್ದರು. ಅಂದಿನಿಂದ ಮತ್ತಷ್ಟು ಗಂಭೀರವಾಗಿದ್ದ ಅರುಣ್ ತಂದೆ ಇಂದು ಮಧ್ಯಾಹ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದುರಂತ ಅಂದರೆ, ಮೇ 25 ಕ್ಕೆ ಅರುಣ್ ಅವರ ಸಹೋದರಿಯ ಮದುವೆ ಇತ್ತು.

ಕೊರೋನಾ ಯಾರನ್ನೂ ಬಿಡಲ್ಲ. ಜನ ಇಂತಕಾ ಘಟನೆಗಳನ್ನು ನೋಡಿ ಕೇಳಿ ಆದ ಮೇಲಾದರೂ ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಹಾಕುವಂತಾಗಲಿ.

Leave a Reply

error: Content is protected !!
Scroll to Top
%d bloggers like this: