ಬುರ್ಖಾ ಮತ್ತು ಮುಖ ಮುಸುಕು ನಿಷೇಧ ತಕ್ಷಣದಿಂದ ಜಾರಿ, ಸಂಸತ್ ಅನುಮೋದನೆ !
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಬುರ್ಖಾ ಹಾಗೂ ಮುಖ ಮುಸುಕುಗಳನ್ನು ನಿಷೇಧಿಸಲು ಸರಕಾರ ಮುಂದಾಗಿದೆ. ಇದೀಗ ಬುರ್ಖಾ ಹಾಗೂ ಮುಖ ಮುಸುಕುಗಳನ್ನು ನಿಷೇಧಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅಂದಹಾಗೆ ಬುರ್ಖಾ ನಿಷೇಧ ಜಾರಿಯಾದದ್ದು ಭಾರತದಲ್ಲಿ ಅಲ್ಲ ಅದು ಶ್ರೀಲಂಕಾ ದ್ವೀಪದಲ್ಲಿ.
ಶ್ರೀಲಂಕಾದ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಮಾರ್ಚ್’ನಲ್ಲಿ ಬುರ್ಖಾ ಮತ್ತು ಮುಖ ಮುಸುಕು ನಿಷೇಧಿಸುವ ನಿಟ್ಟಿನಲ್ಲಿ ಹಲವು ತಿಂಗಳುಗಳ ಹಿಂದೆಯೇ ಸಹಿ ಹಾಕಿದ್ದರು. ನಂತರ ಇವುಗಳನ್ನು ನಿಷೇಧಿಸಲು ಸಂಪುಟದ ಅನುಮೋದನೆ ಕೋರಿದ್ದರು.
ಇದೀಗ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ನಿಷೇಧಕ್ಕೆ ಅನುಮೋದನೆ ನೀಡಿದೆ. ಇದರಿಂದ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಮುಖ ಮುಸುಕು ಧರಿಸಲು ಅವಕಾಶ ಇರುವುದಿಲ್ಲ.
ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ರೀತಿಯ ಮುಖಮುಚ್ಚುವಿಕೆಯ ಮೇಲೆ ನಿಷೇಧ ಹಾಕಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶ್ರೀಲಂಕಾದ ಸಂಪುಟ ವಕ್ತಾರ ಮತ್ತು ವಾರ್ತಾ ಸಚಿವ ಕೆಹೆಲಿಯಾ ರಂಬುಕೆಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.