ಬರೋಬ್ಬರಿ 3000 ಕೊರೋನಾ ಸೋಂಕಿತರು ಬೆಂಗಳೂರಿನಿಂದ ಪರಾರಿ | ಸ್ಪೋಟಕ ಸತ್ಯ ಬಿಚ್ಚಿಟ್ಟ ಡಿಸಿಎಂ ಅಶೋಕ್
ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರು 3,000 ಕೋವಿಡ್ -19 ಸೋಂಕಿತರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಣೆಯಾಗಿದ್ದಾರೆ’ ಅನ್ನೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬುಧವಾರ ಹೆಚ್ಚಿನ ಸೋಂಕಿತ ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಮತ್ತು ಬೆಂಗಳೂರಿನಿಂದ ಕಾಣೆಯಾಗಿದ್ದಾರೆ.
ಬೆಂಗಳೂರಿನಿಂದ ‘ಕಾಣೆಯಾದ’ ಸುಮಾರು 3 ಸಾವಿರ ಜನರು ಈ ರೋಗವನ್ನು ಹರಡುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ತಿಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ.
‘ ನಾನು ರಾಜ್ಯದ ಜನತೆ ಬಳಿ ವಿನಂತಿ ಮಾಡುತ್ತಿದ್ದೇನೆ, ನಿಮಗೆ ಪಾಸಿಟಿವ್ ಅಂತ ನಿಮಗೆ ಸಂದೇಶ ಬಂದರೆ, ದಯವಿಟ್ಟು ಸಂದೇಶ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿ.
ಈ ನಡುವೆ ಕೆಲವು ಮಂದಿ ಶೇ 30 ಮಂದಿ ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ತಮ್ಮ ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ತಮ್ಮ ಆರೋಗ್ಯದಲ್ಲಿ ಏರುಪೇರು ಆದ ಕೂಡಲೇ ತಲೆ ಮರೆಸಿಕೊಳ್ಳುತ್ತಿದ್ದು, ಹೀಗೆ ಮಾಡಬೇಡಿ, ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಅವರು ಸೊಂಕಿತರ ಮನೆಯನ್ನು ಈ ಬಾರಿ ಬೇರೆ ರೀತಿಯಲ್ಲಿ ಮಾರ್ಕ್ ಮಾಡಲಾಗುವುದು ಅಂತ ಹೇಳಿದರುು.