ಪುತ್ತೂರು: ಕೋವಿಡ್ ನಿಯಮ ಉಲ್ಲಂಘಣೆ ಮಾಡಿದ ಅಂಗಡಿಗಳಿಗೆ ದಂಡ ನಗರಸಭೆ
ಪುತ್ತೂರು: ಸರ್ಕಾರದ ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ಮಂಗಳವಾರ ಬೆಳಗ್ಗೆ ವ್ಯಾಪಾರ ನಡೆಸಿದ ಅಂಗಡಿಗಳಿಗೆ ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿದ ನಗರಸಭಾ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಪುತ್ತೂರು ನಗರದ ಜವುಳಿ ಅಂಗಡಿಯೊಂದಕ್ಕೆ ರೂ. 3ಸಾವಿರ, ಪ್ಲಾಸ್ಟಿಕ್ ಸಾಮಾಗ್ರಿ ಅಂಗಡಿಗಳಿಗೆ ರೂ. 5ಸಾವಿರ ಮತ್ತು ರೂ. 2ಸಾವಿರ ದಂಡ ವಿಧಿಸಿದರು.
ಪುತ್ತೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ನಗರ ಸಭೆಯ ಸಿಬ್ಬಂದಿಗಳು ಹಾಗೂ ಕೋವಿಡ್ ಮಾರ್ಷಲ್ಗಳು ಕಾರ್ಯಾಚರಣೆಯಲ್ಲಿ ಸಹಕರಿಸಿದರು.