Ad Widget

ಗೋಮೂತ್ರ , ಪಂಚಗವ್ಯ ಘೃತ, ಗೋ ಘೃತ, ಅಗ್ನಿಹೊತ್ರ ಇವುಗಳ ವೈಜ್ಞಾನಿಕ & ಆಯುರ್ವೇದ ಮಹತ್ವ ಹಾಗೂ ಪರಿಣಾಮ

ಗೋಮೂತ್ರ , ಪಂಚಗವ್ಯ ಘೃತ, ಗೋ ಘೃತ, ಅಗ್ನಿಹೊತ್ರ ಇವುಗಳ ವೈಜ್ಞಾನಿಕ, ಆಯುರ್ವೇದ ಶಾಸ್ತ್ರೀಯ, ಮಹತ್ವ ಹಾಗೂ ಪರಿಣಾಮ, ಈ ವಿಚಾರವಾಗಿ ಗೋಶಾಲೆ ಪ್ರಮುಖರು ಹಾಗೂ ಆಸಕ್ತ ಗೋಪಾಲಕರ ಆನ್ಲೈನ್ ಬೈಠಕ್ ನ ಸಾರಾಂಶ.

ಪ್ರಸ್ತಾವನೆ

ಗೋವು ಆಧ್ಯಾತ್ಮ, ಆರೋಗ್ಯ, ಆರ್ಥಿಕತೆ;ಸತ್ವಯುತ ಮಣ್ಣು, ನೀರು ,ಆಹಾರ ಇವುಗಳಿಗೆ ಮೂಲ. ದೇಶಾದ್ಯಂತ ನಡೆದ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ದೇಶೀ ಗೋವಿನ ಬಗ್ಗೆ ಜಾಗೃತಿ ಮೂಡಿಸಿತು. ಗೋವಿನ ಬಗೆಗಿನ ಶ್ರದ್ಧೆ ನಮ್ಮ ಜನಮಾನಸದಲ್ಲಿ ಮೊದಲೇ ಬೇರೂರಿತ್ತು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿ ,ಗೋವಿನ ಪಾಲನೆ-ಪೋಷಣೆ, ಚಿಕಿತ್ಸೆ;ಗೋ ಆಧಾರಿತ ಕೃಷಿ, ಶಕ್ತಿ ಉತ್ಪಾದನೆ; ಉತ್ಪನ್ನಗಳ ತಯಾರಿ, ಮಾರುಕಟ್ಟೆ; ಪಂಚಗವ್ಯ ಮೂಲಕ ಮನುಷ್ಯರ ಚಿಕಿತ್ಸೆ ಇತ್ಯಾದಿ ಚಟುವಟಿಕೆಗಳ ಮೂಲಕ ಗೋವಿನ ಬಗ್ಗೆ ಜಾಗೃತಿ ಮೂಡಿಸುವ, ಪರಿವರ್ತನೆ ತರುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ಇಂದಿನ ಈ ಆನ್ಲೈನ್ ಬೈಠಕ್ ಋಷಿ ವಾಕ್ಯದೊಡನೆ ವಿಜ್ಞಾನ ಕಲೆಯನ್ನು ಮೈಳೈಸುವ ಒಂದು ಪ್ರಯತ್ನ.
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು,ವ್ಯಾಪಕ ಅರಿವು ಮೂಡಿಸುವ ಒಂದು ಪುಟ್ಟ ಹೆಜ್ಜೆ.

Ad Widget Ad Widget Ad Widget

ಗೋಮೂತ್ರ, antiviral, antifungal ಕ್ರಿಮಿಘ್ನ.

ಪಂಚಗವ್ಯ ಘೃತ , ಅಥವಾ ದೇಶೀ ಗೋವಿನ ತುಪ್ಪ (ಘೃತ)ಎರಡು ಹನಿ ಮೂಗಿಗೆ ,ಎರಡು ಹನಿ ನಾಭಿ (ಹೊಕ್ಕುಳು) ಗೆ ರಾತ್ರಿ ಮಲಗುವಾಗ ಹಾಕುವುದು, ನಾಭಿಯಲ್ಲಿ ಪ್ರದಕ್ಷಿಣೆ ಅಪ್ರದಕ್ಷಿಣೆ ಆಕಾರದಲ್ಲಿ ಬೆರಳಿನಿಂದ ತಿರುವುವುದು. ಮೂಗಿಗೆ ಹಾಕಿದ ತುಪ್ಪ ಶರೀರದ ಉಷ್ಣತೆಗೆ ಕರಗಿ, ಆಮ್ಲಜನಕ ಬಿಡುಗಡೆ ಮಾಡುತ್ತದೆ. ಕಣ್ಣು-ಕಿವಿ ಮೂಗಿನ ತೊಂದರೆಗಳನ್ನು ನಿವಾರಿಸುತ್ತದೆ. ನರಮಂಡಲವನ್ನು ಚುರುಕುಗೊಳಿಸುತ್ತದೆ.
ಪಂಚಗವ್ಯ ಘೃತ ಎರಡು ಬಿಂದು ಮೂಗಿಗೆ ಹಾಕುವುದರಿಂದ ಆಮ್ಲಜನಕ ಉತ್ಪತ್ತಿಯ ಜೊತೆಗೆ ವೈರಾಣುಗಳ ನಾಶ ಸಾಧ್ಯ.
ಎದೆಗೆ ಹಚ್ಚುವುದರಿಂದ ಉಸಿರಾಟದ ತೊಂದರೆ ನಿವಾರಣೆ ಆಗುತ್ತದೆ. ICU ನಲ್ಲಿ ಇರುವವರೂ ಸುಧಾರಣೆ ಹೊಂದುವುದು ಸಾಧ್ಯ ಆಗಿದೆ.
ತುಪ್ಪ ಹಳತಾದಷ್ಟು ಅದರ ಔಷಧೀಯ ಗುಣ ಜಾಸ್ತಿ.
ಪಂಚಗವ್ಯ ಸೇವನೆಯಿಂದ central nervous system activation, ನರಗಳ ಶಕ್ತಿವರ್ಧನೆ, ಕಣ್ಣಿನ ಸಮಸ್ಯೆ ನಿವಾರಣೆ ,ವಾತ ಹಾಗೂ ಒತ್ತಡ ನಿವಾರಣೆ ಸಾಧ್ಯ.
ಸೂಕ್ಷ್ಮ ಅಂಗಗಳಾದ ಮೂತ್ರಕೋಶ, ಯಕೃತ್, ಶ್ವಾಸಕೋಶಗಳನ್ನು ಶುದ್ಧೀಕರಿಸಲು ಪಂಚಗವ್ಯದಷ್ಟು ಪರಿಣಾಮಕಾರಿ ಔಷಧಿ ಇನ್ನೊಂದಿಲ್ಲ.
ಆಹಾರ-ಪಥ್ಯ, ಬಿಸಿನೀರು ಬಳಕೆ, ಪರಿಸರದ ಸ್ವಚ್ಛತೆ ಇವು ಅತ್ಯಂತ ಅವಶ್ಯಕ.

ಅಗ್ನಿಹೋತ್ರ ಮಾಡುವುದರಿಂದ, ಬೆರಣಿ ತುಪ್ಪ ಸುಡುವುದರಿಂದ ಆಮ್ಲಜನಕದ ಬಿಡುಗಡೆ ಆಗುವುದು ವೈಜ್ಞಾನಿಕ ಸತ್ಯ
ಗೋಶಾಲೆ , ದೇಶೀ ಗೋವು ಇರುವ ಪರಿಸರದ ಮನೆಗಳಲ್ಲಿ ಅಗ್ನಿಹೊತ್ರಕ್ಕೆ ಬೇಕಾದ ಬೆರಣಿ, ತುಪ್ಪ ಪೂರೈಸಿ ವಾತಾವರಣದ ಶುದ್ದಿ ಹಾಗೂ ಆರೋಗ್ಯ ವೃದ್ಧಿಗೆ ಸಹಕರಿಸುವುದು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲೇ ಅಗ್ನಿಹೋತ್ರ ಮಾಡುವುದು ಶ್ರೇಷ್ಠ ‌.

ತಾಜಾ ಗೋಮೂತ್ರ ಮೈಗೆ ಮಸಾಜ್ ಮಾಡಿ ಸ್ನಾನ ಮಾಡಿ. ಇದು ಅನೇಕ ಚರ್ಮರೋಗಗಳಿಗೆ ಪರಿಣಾಮಕಾರಿ.
ಸೆಗಣಿ ಹಾಗೂ ಗೋಮೂತ್ರ ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮುಲಾಮು ತಯಾರಿಸಿ- ಸೊಂಟ/ಗಂಟು ನೋವು ಇರುವಕಡೆ ಹಚ್ಚಿ , ಅರ್ಧ ಗಂಟೆ ಎಳೆ ಬಿಸಿಲಿನಲ್ಲಿ ಒಣಗಿಸಿ ತೊಳೆದರೆ ನೋವು ನಿವಾರಣೆ ಸಾಧ್ಯ.
ದೇಶಿ ಗೋವಿನ ಮೂತ್ರ, ಸೆಗಣಿ, ಹಾಲು ಮಾತ್ರ ಬಳಕೆಗೆ ಯೋಗ್ಯ. ಅದರಲ್ಲೂ ಸ್ಥಾನೀಯ ತಳಿ ಗೋವುಗಳನ್ನು ಸಾಕಬೇಕು. ಅವುಗಳನ್ನು ಕನಿಷ್ಠ ಎಂಟು ಗಂಟೆ ಕಾಲ ಹೊರಗಡೆ ಮೇಯಲು ಬಿಡಬೇಕು.
ರಾಜ್ಯ ಸರ್ಕಾರದ ಕಡೆಯಿಂದಲೂ ಈ ರೀತಿಯ ವೈಜ್ಞಾನಿಕ ಸಂಶೋಧನೆಗೆ ಯೋಜನೆ ರೂಪಿಸಲಾಗಿದೆ.
ಮುಂದಿನ ದಿನಗಳಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಈ ತಂಡ ಆನ್ಲೈನ್ನಲ್ಲಿ ಸೇರುವುದು. ಜಿಲ್ಲೆ /ತಾಲೂಕುಗಳಲ್ಲಿ ಟೋಳಿಗಳು ಸೇರಿ ಈ ರೀತಿಯ ಕಾರ್ಯಚಟುವಟಿಕೆಗಳನ್ನು ಪರಸ್ಪರ ಸಹಕಾರದೊಂದಿಗೆ ಅನುಷ್ಠಾನಗೊಳಿಸುವುದು.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: