ಬೆಳ್ತಂಗಡಿಯಲ್ಲಿ ಲಾಕ್ಡೌನ್ ಮಧ್ಯೆಯೇ ಸಾಮೂಹಿಕ ವಿವಾಹ | ಸಾಮಾನ್ಯರಿಗೊಂದು, ಉಳ್ಳ ವರಿಗೊಂದು ನ್ಯಾಯವೇ? ಎಂಬ ಪ್ರಶ್ನೆ ಮತ್ತೆ ಉದ್ಭವ !!
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರುವಂತೆಯೇ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರಾ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಇಂದು ನಡೆದಿದೆ.
ಜನಸಾಮಾನ್ಯರು ರಸ್ತೆಗಿಳಿದರೆ ಅಂಡಿಗೆ ದಂಡ್ ಬೀಸುವ ಪೊಲೀಸರು, ರಾಜಾರೋಷವಾಗಿ ನೂರಾರು ಜನ ಸೇರಿಸಿ, ಕೋವಿಡ್ ನಿಯಮ ಉಲ್ಲಂಘಿಸಿ ಸಾಮೂಹಿಕ ವಿವಾಹ ನಡೆಸಿದ ಮುಖಂಡರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ.
ದೇಶದಲ್ಲಿ ರಾಜ್ಯದಲ್ಲಿ ಜಿಲ್ಲೆಯಲ್ಲಿ ಗಲ್ಲಿಗಲ್ಲಿಗಳಲ್ಲಿ ಕೊರೊನಾ ರಣಕೇಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸರಕಾರ ವೀಕೆಂಡ್ ಕರ್ಪ್ಯೂ ಜಾರಿ ಗೊಳಿಸಿದೆ. ಮಸೀದಿ, ಚರ್ಚ್, ಮಂದಿರಗಳನ್ನು ಬಂದ್ ಮಾಡಲಾಗಿದೆ. ಆದರೆ ಇಲ್ಲಿ ಮದುವೆ ನಡೆಯುತ್ತಿದೆ.
ಸಾಮೂಹಿಕ ವಿವಾಹ ಅತ್ಯಂತ ಪವಿತ್ರ ಕಾರ್ಯ. ಆದರೆ ಇದು ಅಕಾಲಿಕ ಸಮಯವಾಗಿರುವ ಕಾರಣ ನಿಯಮ ಪಾಲನೆ ಕಡ್ಡಾಯ.
ಪು0ಜಾಲ್ಕಟ್ಟೆ ಠಾಣೆಯ ಎದುರಲ್ಲೇ ರಾಜಾರೋಷವಾಗಿ ಮಾಸ್ಕ್ ಸಾಮಾಜಿಕ ಅಂತರಗಳಿಲ್ಲದೆ ಸಾಮೂಹಿಕ ನಡೆಯುತ್ತಿದೆ. ಯಾಕೆ ಕೈ ಕಟ್ಟಿ ಕುಳಿತಿದೆ ಆಡಳಿತ ವ್ಯವಸ್ಥೆ.
ಕಾರ್ಯಕ್ರಮ ನಡೆಸಿದವರ ಮೇಲೆ ಕೇಸ್ ಬೀಳುತ್ತಾ? ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.