ಹಂಪಿಯ ಪ್ರಸಿದ್ಧ ಬಡವಿ ಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ನಿಧನ
ಹಂಪಿಯ ಪ್ರಸಿದ್ಧ ಬಡವಿ ಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಅವರು ಭಾನುವಾರ ನಿಧನ ಹೊಂದಿದರು. 87 ವರ್ಷ ಪ್ರಾಯದ ಅವರು ವಯೋಸಹಜ ಖಾಯಿಲೆಯಿಂದ ಇಂದು ಮನೆಯಲ್ಲಿ ನಿಧನಹೊಂದಿದರು.
ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯವರು. 1979ರಲ್ಲಿ ಅವರು ಹಂಪಿಗೆ ಬಂದು ನೆಲೆಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದ ಅವರು ವಯೋ ಸಹಜ ಅನಾರೋಗ್ಯದ ಕಾರಣದಿಂದ 2020ರಲ್ಲಿ ಪೂಜೆ ನಿಲ್ಲಿಸಿದ್ದರು. ಬಳಿಕ ಅವರ ಮಗ ಪೂಜೆ ಕಾರ್ಯ ಮುಂದುವರಿಸಿದ್ದರು.
ಹಂಪಿಯ ಬಡವಿ ಲಿಂಗ ಏಕಶಿಲಾ ಮೂರ್ತಿಯಾಗಿದ್ದು, ಭಾರಿ ಪ್ರಸಿದ್ದಿ ಪಡೆದಿದೆ. ಸುಮಾರು ಮೂರು ಮೀಟರ್ ಎತ್ತರದ ಎತ್ತರದ ಈ ಮೂರ್ತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತಲಾಗಿದೆ ಎನ್ನಲಾಗುತ್ತದೆ .