ದರ್ಪ ಪ್ರದರ್ಶಿಸಿ ಶರ್ಟ್ ಹಿಡಿದೆಳೆದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ಓಡಿ ಹೋದ ಯುವಕ
ಪೊಲೀಸ್ ಅಧಿಕಾರಿಯೊಬ್ಬರಿಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿ ಓಡಿಹೋಗುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ವಾಹನದಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿ ಒಬ್ಬ ಯುವಕನೊಬ್ಬನೊಂಡಿಗೆ ದರ್ಪ ತೋರಿಸಿದ್ದಾರೆ. ಹತ್ತಿರ ಕರೆದ ಯುವಕನ ಶರ್ಟ್ ಹಿಡಿದು ಜೋರಾಗಿ ಅಲುಗಾಡಿಗಿಸಿದ್ದಾರೆ.
ಆದರೆ, ಪೋಲೀಸ್ ನ ಯುವಕನಿಗೆ ಕೋಪ ಬಂದಿದೆ. ಕೊನೆಗೆ ಪೊಲೀಸ್ ಅಧಿಕಾರಿಯ ವರ್ತನೆಯಿಂದ ಕೆರಳಿದ ಯುವಕ ಅವನಿಗೆ ಕಪಾಳಮೋಕ್ಷ ಮಾಡಿ ಓಡಿಹೋಗಿದ್ದಾನೆ.
ಆ ಸಮಯದಲ್ಲಿ ಜೀಪಿನ ಹೊರಗೆ ನಿಂತಿದ್ದ ಪೇದೆಯೊಬ್ಬರು ಪೋಲೀಸ್ ಅಧಿಕಾರಿಯ ಕೆನ್ನೆಗೆ ಬಡಿದು ಓಡಿ ಹೋಗುತ್ತಿದ್ದ ಯುವಕನನ್ನು ಹಿಡಿಯಲು ಚೇಸ್ ಮಾಡಿದ್ದಾರೆ. ಆದರೆ ಪೊಲೀಸರ ಕೆನ್ನೆ ತಟ್ಟಿ ಓಡಿಹೋಗಿದ್ದ ಯುವಕ ಸಂದುಗೊಂದುಗಳಲ್ಲಿ ಓಡಿ ತಪ್ಪಿಸಿಕೊಂಡಿದ್ದಾನೆ.
ಯುವಕನಿಗೆ ಪೋಲೀಸ್ ಕಪಾಳಮೋಕ್ಷ ಮಾಡಲು ಸರಿಯಾದ ಕಾರಣ ತಿಳಿದಿಲ್ಲವಾದರೂ, ಲಾಕ್ ಡೌನ್ ವೀಕೆಂಡ್ ಕರ್ಫ್ಯೂ ಮುಂತಾದ ಸಂದರ್ಭಗಳಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ತೋರುವ ಅತಿಯಾದ ದರ್ಪದ ವರ್ತನೆಯಿಂದ ಉದ್ರೇಕಗೊಂಡ ಈ ವ್ಯಕ್ತಿ ಆ ರೀತಿ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.
ಈ ಘಟನೆಯು ಅಂತರ್ಜಾಲದಲ್ಲಿ ಸಂವೇದನೆಯನ್ನು ಸೃಷ್ಟಿಸಿದೆ. ಅಂದ ಹಾಗೆ ಇದು ನಡೆದದ್ದು ಆಂಧ್ರಪ್ರದೇಶದ ಪಟ್ಟಣವೊಂದರಲ್ಲಿ.