ಸುಳ್ಯ – ಕಡಬ: ವೀಕೆಂಡ್ ಕರ್ಫ್ಯೂ | ಪೊಲೀಸ್ ಗಸ್ತು,ಅಘೋಷಿತ ಬಂದ್

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಸುಳ್ಯ, ಕಡಬ ತಾಲೂಕು ಸಂಪೂರ್ಣ ಸ್ತಬ್ಧವಾಗಿದೆ.

ಸುಳ್ಯ ಹಾಗೂ ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ,ನೆಲ್ಯಾಡಿ, ಉಪ್ಪಿನಂಗಡಿ ಪೊಲೀಸರು, ಆಯಾ ಪ್ರದೇಶಗಳ ಪಂಚಾಯತ್ ಅಧಿಕಾರಿಗಳು, ಕೋವಿಡ್ ಟಾಸ್ಕ್ ಫೋರ್ಸ್ ತಂಡ,ಗೃಹರಕ್ಷಕ ದಳ ಸಿಬ್ಬಂದಿ ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆಯೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

ಸಮಯ ಮೀರಿ ಸಂಚರಿಸುತ್ತಿರುವ ಪ್ರತಿ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಪೆಟ್ರೋಲ್ ಪಂಪ್, ಮೆಡಿಕಲ್ ಹೊರತುಪಡಿಸಿ ಎಲ್ಲ ಅಂಗಡಿಗಳು, ಸಂಸ್ಥೆಗಳು ಸಂಪೂರ್ಣ ಬಂದ್ ಆಗಿದೆ.

Leave A Reply

Your email address will not be published.