ಪಕ್ಷಿಯ ಗೂಡನ್ನೇ ಮಾಸ್ಕ್ ಆಗಿ ಮುಖಕ್ಕೆ ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿ
ಮಾಸ್ಕ್ ಬದಲು ಪಕ್ಷಿಯ ಗೂಡನ್ನು ಮುಖಕ್ಕೆ ಧರಿಸಿದ ವ್ಯಕ್ತಿಯೊಬ್ಬ ಇದೀಗ ದೇಶದ ಗಮನ ಸೆಳೆದಿದ್ದಾರೆ.
ತೆಲಂಗಾಣದ ಮೆಹಬೂಬ್‌ನಗರದಲ್ಲಿ ವಾಸವಾಗಿರುವ ಮೇಕಲಾ ಕುರ್ಮಯ್ಯ ಎಂಬಾತನೇ ಈ ರೀತಿ ಮಾಸ್ಕ್ ಕೊಳ್ಳಲು ಹಣ ವಿಲ್ಲದೆ ಇದ್ದರೂ ಸಾಮಾಜಿಕ ಜವಾಬ್ದಾರಿ ಅರಿತು ನಡೆಯುತ್ತಿರುವ ವ್ಯಕ್ತಿ.
ಕುರಿ ಕಾಯುತ್ತಾ ಜೀವನ ನಿರ್ವಹಿಸುವ ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಪಡೆಯಲು ಸರ್ಕಾರಿ ಕಚೇರಿಗೆ ಹೋಗಬೇಕಿತ್ತು. ಆದರೆ ಅವನಿಗೆ ಮಾಸ್ಕ್ ಕೊಂಡು ಧರಿಸಲು ಹಣವಿಲ್ಲವೆಂದು ಪಕ್ಷಿಯ ಗೂಡನ್ನೇ ಮಾಸ್ಕ್ ರೀತಿಯಾಗಿ ಧರಿಸಿಕೊಂಡು ಹೋಗಿದ್ದಾನೆ.
ತೆಲಂಗಾಣದಲ್ಲಿ ಮಾಸ್ಕ್ ಧರಿಸದೇ ಕಚೇರಿಯೊಳಗೆ ಸೇರಿಸಲ್ಲ. ಇನ್ನೂ ಮಾಸ್ಕ್ ಹಾಕದೆ ಹೊರಗಡೆ ಹೋದರೆ ಒಂದು ಸಾವಿರ ರೂ. ದಂಡ ತೆರುವ ಬದಲು ಹಕ್ಕಿಯ ಗೂಡು ಮುಖವಾಡದ ರೀತಿಯಲ್ಲಿ ಹಾಕಿ ಕಚೇರಿಯೊಳಗೆ ಕಾಲಿಟ್ಟಿದ್ದಾನೆ.
ಆತ ಕುರಿ ಕಾಯುವ ವ್ಯಕ್ತಿಯಾಗಿದ್ದು, ಅನಕ್ಷರಸ್ಥನಾಗಿದ್ದರೂ, ಸಾಮಾಜಿಕ ಜವಾಬ್ದಾರಿಯಿಂದ ಈ ರೀತಿ ಮಾಡಿರುವುದಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೀಗ ಆತನ ಈ ವಿಶಿಷ್ಟವಾದ ಸಾವಯವ ಮಾಸ್ಕ್ ಇಂಟರ್ನೆಟ್ ನಲ್ಲಿ ಟ್ರೆಂಡ್ ಹುಟ್ಟುಹಾಕುತ್ತಿದೆ.