Breaking | ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೋನ ಲಸಿಕೆ
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೇ 1 ರಿಂದ18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೋನ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇದೀಗ ದೇಶದಲ್ಲಿ ಎರಡನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 45 ವರ್ಷ ಮೇಲ್ಪಟ್ಟು ಮಧುಮೇಹದ ರೀತಿಯ ಪೂರ್ವ ಕಾಯಿಲೆಗಳನ್ನು ಹೊಂದಿರುವವರಿಗೆ ನೀಡಲಾಗುತ್ತಿದೆ.
ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ.
ಇದೀಗ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಈ ನಿರ್ಧಾರದಿಂದ ಕೊರೋನಾ ವಿರುದ್ಧದ ಹೋರಾಟ ಮಹತ್ವದ ಘಟ್ಟ ತಲುಪಲಿದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ನೀಡಿ ಅದರಿಂದ ಸಾವಿನ ಸಂಖ್ಯೆಯನ್ನು ಕಮ್ಮಿ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದು. ಲಸಿಕೆ ನೀಡಿದವರಿಗೆ ಕೂಡ ಕೋರೋನಾ ಬಂದರೂ ಅದರ ಪರಿಣಾಮಗಳು ತೆಗೆದುಕೊಳ್ಳದೆ ಇರುವವರಿಗಿಂತ ಕ್ಷೀಣವಾಗಿ ಇರುತ್ತದೆ.