ಮಕ್ಕಳ ಆಟಿಕೆಯಲ್ಲಿ 14 ಲಕ್ಷ ಮೌಲ್ಯದ ಚಿನ್ನ ಸಾಗಾಟ; ಸೊತ್ತು ಸಹಿತ ಬಂಟ್ವಾಳದ ಓರ್ವ ಸೆರೆ

ಆಟಿಕೆಯ ವಸ್ತುವಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 14.55 ಲಕ್ಷ ರೂ. ಚಿನ್ನದೊಂದಿಗೆ ಓರ್ವನನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಆರಿಸ್ ಬಂಧಿತ ಆರೋಪಿ. ಸ್ಪೈಸ್ ಜೆಟ್ ವಿಮಾನದ ಮೂಲಕ‌ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಆರಿಷ್ ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಈ ಸಂದರ್ಭ ಟೊಯ್ಸ್, ಟ್ರಿಮ್ಮರ್, ವಾಟರ್ ಡಿಸ್ಪೆನ್ಸರ್ ಹಾಗೂ ಜ್ಯೂಸ್ ನಲ್ಲಿ ಅಡಗಿಸಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ 300 ಗ್ರಾಂ ತೂಕದ 14.55 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

Leave A Reply

Your email address will not be published.