ಜಾಕಿ ಚಾನ್ ತನ್ನ ಮಗನಿಗೆ ಸೇರಬೇಕಿದ್ದ 2,603 ಕೋಟಿ ರೂ ಆಸ್ತಿಯನ್ನು ಚಾರಿಟಿಗೆ ನೀಡಿದ್ದು ಯಾಕೆ ಗೊತ್ತಾ ?
ಡ್ರಗ್ ಪ್ರಕರಣದಲ್ಲಿ ಜಾಕಿ ಚಾನ್ ಮಗ ಜೈಸಿ ಚಾನ್ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಅವರು ಬೇಸರ ಹೊರ ಹಾಕಿದ್ದರು.
ನಟ ಜಾಕಿ ಚಾನ್ ಗೆ ಈಗ 67 ವರ್ಷ ವಯಸ್ಸು. ಜೀವನಪೂರ್ತಿ ಸ್ಟಂಟ್ ಅನ್ನು ಮತ್ತು ಸಿನಿಮಾವನ್ನು ಏಕಕಾಲಕ್ಕೆ ಪ್ರೀತಿಸಿದ ನಟ ಇವತ್ತು ಜಗದ್ವಿಖ್ಯಾತ. ಇವರು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ ತುಂಬಾ ದೊಡ್ಡ ಮೊತ್ತ. ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಜಾಕಿ ಚಾನ್ ಗೆ ಮೊದಲ ಸ್ಥಾನ. ದಿನದ ಹಲವು ಶೆಡ್ಯೂಲ್ ಗಳಲ್ಲಿ ರಾತ್ರಿ-ಹಗಲು ನಿರಂತರವಾಗಿ ದುಡಿದು ಆತ ಬರೋಬ್ಬರಿ 2603 ಕೋಟಿ ರೂಪಾಯಿ ಗಳಿಸಿಕೊಂಡಿದ್ದಾರೆ.
ಆಶ್ಚರ್ಯವೆಂದರೆ ಇವರು ತಮ್ಮ 2603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ ಬರೆದಿದ್ದಾರೆ. ತಾನು, ತನ್ನ ಮಕ್ಕಳು ಎಂಬ ಸಹಜವಾದ ಪುತ್ರ ವ್ಯಾಮೋಹವನ್ನು ತ್ಯಜಿಸಿ ಸಂನ್ಯಾಸಿಯ ಥರ ಯೋಚಿಸಿದ್ದಾರೆ ಜಾಕಿ ಚಾನ್.
2019ರ ಒಂದೇ ವರ್ಷದಲ್ಲಿ ಜಾಕಿ ಚಾನ್ ಬರೋಬ್ಬರಿ 267 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೀಗಾಗಿ ಪ್ರತಿ ವರ್ಷ ಅವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ, ಇವರು ತಮ್ಮೆಲ್ಲ ಆಸ್ತಿಯನ್ನು ಚಾರಿಟಿಗೆ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಹೀಗೆ ಮಾಡುವುದಕ್ಕೂ ಒಂದು ಬಲವಾದ ಕಾರಣವಿದೆ.
ಜಾಕಿ ಚಾನ್ ಮಗನ ಹೆಸರು ಜೈಸಿ ಚಾನ್. ವೃತ್ತಿಯಲ್ಲಿ ಮ್ಯೂಸಿಷಿಯನ್ ಹಾಗೂ ನಟ. 2014ರಲ್ಲಿ ಜೈಸಿ ಡ್ರಗ್ ಪ್ರಕರಣವೊಂದಲ್ಲಿ ಸಿಲುಕಿದ್ದರು. ಅರೆಸ್ಟ್ ಕೂಡ ಆಗಿದ್ದರು. ಆ ಸಮಯದಲ್ಲಿ ಮಗನ ಪರವಾಗಿ ಜಾಕಿ ಚಾನ್ ಕ್ಷಮೆ ಕೇಳಿದ್ದರು.
‘ಡ್ರಗ್ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ’ ಎಂದು ಜಾಕಿ ಚಾನ್ ಬೇಸರ ಹೊರ ಹಾಕಿದ್ದರು.
“ನನ್ನ ಮಗ ಸಮರ್ಥನಾಗಿದ್ದರೆ ಸ್ವಂತ ಹಣವನ್ನು ಸಂಪಾದಿಸಿತ್ತಾನೆ. ಒಂದು ವೇಳೆ ಆತ ಅಸಮರ್ಥರಾಗಿದ್ದರೆ, ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ” ಎಂದು ಅವರು ಹೇಳಿಕೊಂಡಿದ್ದರು. ಮಗ ತಪ್ಪು ಹಾದಿ ಹಿಡಿದ್ದಾನೆ ಎನ್ನುವ ಕಾರಣಕ್ಕೆ ತಮ್ಮ ಆಸ್ತಿಯನ್ನು ಜಾಕಿ ಚಾನ್ ಚಾರಿಟಿಗೆ ನೀಡಿದ್ದಾರೆ.
ಒಂದು ವೇಳೆ ನಾವು ಆತನ ಸ್ಥಾನದಲ್ಲಿದ್ದರೆ, ಇಂತಹ ಅಮೂಲ್ಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವಾ ಹೇಳಿ? ಅದಕ್ಕೆ, ಜಾಕಿ ಚಾನ್ ನ ಆ ಗುಣಕ್ಕೇ ಆತ ಅಷ್ಟು ವಿಖ್ಯಾತಿ ಹೊಂದಿರುವುದು ಮತ್ತು ಈ ಮೇರು ನಟ ಅಷ್ಟು ಉತ್ತುಂಗದಲ್ಲಿರುವುದು.