ನಟಿ ರಶ್ಮಿಕಾ ಅಂದು ಸಾಲು ಮರದ ತಿಮ್ಮಕ್ಕನ ಬಗ್ಗೆ ವಿವರಿಸಲು ತಡಬಡಾಯಿಸಿದ ಸಂದರ್ಭ ತಿಮ್ಮಕ್ಕನ ಸಾಧನೆ ಬಗ್ಗೆ ಹೇಳಿದ್ದ ನಟ ವಿವೇಕ್ | ವಿಡಿಯೋ ವೈರಲ್​

ಮೊನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟ ತಮಿಳು ಚಿತ್ರರಂಗದ ಹಾಸ್ಯ ದಿಗ್ಗಜ ವಿವೇಕ್​ ಕೇವಲ ಕಲಾವಿದ ಮಾತ್ರ ಆಗಿರಲಿಲ್ಲ. ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಬೆಳೆಸಲೂ ಸಹಕಾರಿಯಾಗಿದ್ದರು. ಇಂದು ವಿವೇಕ್​ ಮೃತಪಡುತ್ತಿದ್ದಂತೆ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಸಾಲು ಮರದ ತಿಮ್ಮಕ್ಕನ ಸಾಧನೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟದ್ದರು.

ಎರಡು ವರ್ಷಗಳ ಹಿಂದಿನ ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕಗೆ ಸನ್ಮಾನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ವಿವೇಕ್​ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಸಾಲು ಮರದ ತಿಮ್ಮಕ್ಕನ ಬಗ್ಗೆ ಕೇಳಲಾಗಿತ್ತು. ಇದನ್ನು ಹೇಳೋಕೆ ರಶ್ಮಿಕಾ ತಡವರಿಸಿದ್ದರು. ಆಗ ರಶ್ಮಿಕಾಗೆ ಹೆಚ್ಚಿನದೇನು ತಿಳಿದಿಲ್ಲ ಎಂದು ಅರಿತುಕೊಂಡ ವಿವೇಕ್ ಗೊತ್ತಿಲ್ಲ ಮೈಕ್​ ಕೈಗೆ ತೆಗೆದುಕೊಂಡು ತಿಮ್ಮಕ್ಕ ಅವರ ಬಗೆಗಿನ ಇಂಚಿಂಚು ಮಾಹಿತಿಯನ್ನೂ ಬಿಚ್ಚಿಡುತ್ತಾ ಬಂದರು. ಅವರ ಜೀವನ ಹೇಗಿತ್ತು, ಅವರು ಗಿಡ ನೆಡಲು ಆರಂಭಿಸಿದ್ದು ಏಕೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು.

ಅವರ ಮಾತನ್ನು ಕೇಳಿ ಅವತ್ತು ಅಷ್ಟು ದೊಡ್ಡ ಸಭಾಭವನ ವಿವೇಕ್ ಅವರ ಬಗ್ಗೆ ಹೆಮ್ಮೆಪಟ್ಟಿತ್ತು.  ಕನ್ನಡದವರಾಗಿ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾಹಿತಿ ಗೊತ್ತಿಲ್ಲವಲ್ಲ ಎಂದು ರಶ್ಮಿಕಾ ಟ್ರೋಲ್​ ಆಗಿದ್ದು ಒಂದು ಕಡೆಯಾದರೆ, ವಿವೇಕ್​ ತಮಿಳುನಾಡಿನವರಾಗಿ ಕನ್ನಡದ ಮಣ್ಣಿನ ವೃಕ್ಷ ತಾಯಿ, ಸಾಲುಮರದ ತಿಮ್ಮಕ್ಕನ ಬಗ್ಗೆ  ಇಷ್ಟೊಂದು ತಿಳಿದುಕೊಂಡಿದ್ದಾರಲ್ಲ ಎಂಬುದು ಹೆಚ್ಚು ಹೈಲೈಟ್​ ಆಗಿತ್ತು. ಈ ವಿಡಿಯೋ ಇದೀಗ ವಿವೇಕ್ ಅವರ ಮರಣದ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೃದಯ ಸಂಬಂಧಿ ತೊಂದರೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೂ ಅವರೀಗ ಹಾಸ್ಯನಟನಾಗಿ ಮಾತ್ರವಲ್ಲದೆ ಹಲವು ರೀತಿಯ ಪರಿಸರ ಉಳಿಸುವ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮೂಲಕ ಮತ್ತೆ ನೆನಪಾಗುತ್ತಿದ್ದಾರೆ.

https://youtu.be/6g__dg7BhOU

Leave A Reply

Your email address will not be published.