ಬೆಳ್ಳಾರೆ ಝಕರಿಯಾ ಜುಮಾ ಮಸೀದಿಗೆ ಆಡಳಿತಾಧಿಕಾರಿ ನೇಮಕ ; ಆಡಳಿತಾಧಿಕಾರಿ ಯಾಗಿ ನಿವೃತ ಅಬಕಾರಿ ಅಧಿಕಾರಿ ಹಾಜಿ ಬಿ ಯಾಕೂಬ್ ಖಾನ್ ನೇಮಕ
ಬೆಳ್ಳಾರೆ :ಝಕರಿಯಾ ಜುಮಾ ಮಸೀದಿ ಬೆಳ್ಳಾರೆಗೆ ಈ ಹಿಂದೆ ವಕ್ಫ್ ನಿಂದ ನೇಮಕಗೊಂಡ ಮಹಮ್ಮದ್ ರಫಿಯವರು ಮಸೀದಿಯಲ್ಲಿ ಸಮಸ್ಯೆಗಳು ಬಂದಾಗ ಅದನ್ನ ಬಗೆಹರಿಸದೆ ಹಾಗೂ ಅಭಿವೃದ್ಧಿಯ ಕೆಲಸದ ಕಡೆ ಗಮನ ಕೊಡದೆ ಇರುವುದರ ಕುರಿತು ವಕ್ಫ್ ಬೋರ್ಡಿಗೆ ನೊಂದ ಜಮಾಅತರು ಇವರನ್ನು ಈ ಸ್ಥಾನದಿಂದ ತೆರವು ಗೊಳಿಸಬೇಕೆಂದು ಮನವಿಯನ್ನು ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದೀಗ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಗೆ ನೂತನ ಆಡಳಿತಾಧಿಕಾರಿ ಯನ್ನು ನೇಮಕ ಮಾಡಲಾಗಿದೆ.
ಬೆಳ್ಳಾರೆ ಮಸೀದಿಯ ನೂತನ ಆಡಳಿತಾಧಿಕಾರಿಯಾಗಿ ನಿವೃತ ಅಬಕಾರಿ ಅಧಿಕಾರಿ ,ಈ ಹಿಂದೆ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ 5 ವರುಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಹಾಜಿ ಬಿ ಯಾಕೂಬ್ ಖಾನ್ ಇವರು ನೇಮಕ ಗೊಂಡಿರುತ್ತಾರೆ. ಇವರು ಎಪ್ರಿಲ್ 19 ಸೋಮವಾರ ದಂದು ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಸುಮಾರು 40 ವರುಷಗಳ ಕಾಲ ಸೇವಾನುಭವ ಹೊಂದಿ ನಿವೃತ್ತರಾಗಿ ,ಪುತ್ತೂರು ಅನ್ಸಾರ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯ ದರ್ಶಿಯಾಗಿ ಸೇವೆ ಹಾಗೂ ಇತರ ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ಗಳನ್ನು ನಿಭಾಯಿಸಿದ ಅನುಭವವನ್ನು ಹೊಂದಿರುವವರಾಗಿದ್ದಾರೆ.
ಈ ಹಿಂದೆ ಬೆಳ್ಳಾರೆಯಲ್ಲಿ ಅಧಿಕಾರ ವಹಿಸಿರುವ ಸಂದರ್ಭದಲ್ಲಿ ಇವರು ಸರಕಾರದ ಯಾವುದೇ ಅನುದಾನವನ್ನು ಸ್ವೀಕರಿಸದೆ ಉಚಿತ ಸೇವೆಯನ್ನು ನೀಡುತ್ತಿದ್ದರು.