ರಂಜಾನ್ ಸಂದರ್ಭದಲ್ಲಿ ಕೊರೋನಾ ಲಸಿಕೆ ಪಡೆಯುವುದು ನಿಷಿದ್ಧ ಅಲ್ಲ – ಫತ್ವಾ ಹೊರಡಿಸಿದ ಮಸ್ಜಿದ್
“ರಂಜಾನ್ ಸಂದರ್ಭದಲ್ಲಿ ಕೊರೋನಾ ಲಸಿಕೆ ಪಡೆಯಬಹುದಾಗಿದೆ” ಎಂದು ಲಖ್ನೋದ ದಾರುಲ್ ಇಫ್ತಾ ಫರಂಗಿ ಮಹಲ್ ಫತ್ವಾ ಹೊರಡಿಸಿದೆ.
ಕೊರೋನಾ ಲಸಿಕೆಯು ಪಡೆಯುವುದರಿಂದ ರೋಸಾ ಉಲ್ಲಂಘನೆ ಆಗುವುದಿಲ್ಲ. ರಂಜಾನ್ ತಿಂಗಳಿನಲ್ಲಿ ಉಪವಾಸದ ಸ್ಥಿತಿಯಲ್ಲಿ
ಕೊರೋನಾ ಲಸಿಕೆ ತೆಗೆದುಕೊಳ್ಳಬಹುದು” ಎಂದು ಅದು ತಿಳಿಸಿದೆ.
ಕೊರೋನಾ ಲಸಿಕೆ ಆಹಾರವಲ್ಲ. ರಂಜಾನ್ ಉಪವಾಸದ ಸಂದರ್ಭ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು. ಎಂದು ಮನವಿ ಮಾಡಲಾಗಿದೆ. ಕೊರೋನಾ ಲಸಿಕೆ ಪಡೆಯುವುದು ಅನೂರ್ಜಿತವಲ್ಲ ಎಂದು ಧರ್ಮ ಗುರುಗಳು ಹೇಳಿದ್ದಾರೆ.
“ಕೊರೋನಾ ಲಸಿಕೆ ಸೀದಾ ರಕ್ತನಾಳ ಸೇರುತ್ತದೆ. ಹೊಟ್ಟೆಯೊಳಗೆ ಅಲ್ಲ. ಇದರಿಂದ ಉಪವಾಸ ಉಲ್ಲಂಘನೆಯಾಗುವುದಿಲ್ಲ. ಕೊರೋನಾ ಲಸಿಕೆಯನ್ನು ಪಡೆದುಕೊಳ್ಳಬಹುದು” ಎಂದು ಫತ್ವಾದಲ್ಲಿ ತಿಳಿಸಲಾಗಿದೆ.