ಕೆ.ಟಿ ಜಲೀಲ್ ಸಚಿವ ಸ್ಥಾನಕ್ಕೆ ರಾಜಿನಾಮೆ | ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಪ್ರಮಾಣ ವಚನ ಉಲ್ಲಂಘನೆ ಆರೋಪ

Share the Article

    

ಕೇರಳ ಸರಕಾರದ ಉನ್ನತ ಶಿಕ್ಷಣ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಡಾ. ಕೆ.ಟಿ. ಜಲೀಲ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಪ್ರಮಾಣ ವಚನ ಉಲ್ಲಂಘನೆ ಮಾಡಿದ್ದಾರೆಂದು ಲೋಕಾಯುಕ್ತ ತನಿಖೆಯ ಮೂಲಕ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕೇರಳ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಸಚಿವರು ತಮ್ಮ ಸಂಬಂಧಿಯನ್ನು ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು.

ಪ್ರಕರಣದ ಕುರಿತಾದಂತೆ ಲೋಕಾಯುಕ್ತ ತನಿಖೆ ನಡೆಸಿದ ಬಳಿಕ ಕೇರಳ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು, “ಕೆಟಿ ಜಲೀಲ್‌ ವಿರುದ್ಧ ಆರೋಪ ದೃಢೀಕರಿಸಿರುವ ಕಾರಣ ಅವರು ಕೇರಳ ಸರ್ಕಾರದ ಸಚಿವರಾಗಿ ಮುಂದುವರಿಯಬಾರದು ಎಂದು ಲೋಕಾಯುಕ್ತ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.