ವಿಟ್ಲ ಠಾಣಾ ಸಿಬ್ಬಂದಿಯ ಎರಡನೆಯ ರಿಪೋರ್ಟ್ ನೆಗೆಟಿವ್ | ಈಗ ಗುಣಮುಖರಾಗಿ ಮನೆಗೆ – ಹೋಂ ಕ್ವಾರಂಟೈನ್ ಗೆ
ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಗೆ ಮೇ.24 ರಂದು ದೃಢ ಪಟ್ಟಿದ್ದ ಕೋರೋನಾ ಈಗ ನಿವಾರಣೆಯಾಗಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಕಾರ್ಯ ಭಾನುವಾರ ನಡೆದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇ.15 ರಂದು ವಿಟ್ಲಕ್ಕೆ ಆಗಮಿಸಿ ಠಾಣೆಯ ಮೆಟ್ಟಲು ಏರಿದ್ದ ಮಹಾರಾಷ್ಟ್ರ ರಾಯಗಡದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ದೃಢವಾಗುತ್ತಿದ್ದಂತೆ ವಿಟ್ಲದ 5 ಸಿಬ್ಬಂದಿಗಳ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ಸಂದರ್ಭ ಓರ್ವ ಸಿಬ್ಬಂದಿಯ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಆ ವರದಿ ಮೇ.24 ರಂದು ಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಬಳಿಕ ಮೇ.29 ರಂದು ಅವರ ಗಂಟಲ ದ್ರವ ಸಂಗ್ರಹಣೆ ಎರಡನೆಯ ಬಾರಿ ಮಾಡಿದ್ದು, ಮೇ.31 ರಂದು ಅದರ ವರದಿ ಬಂದಿದ್ದು ಅದು ನೆಗೆಟಿವ್ ಎಂದು ಬಂದಿದೆ. ಮೊದಲ ವರದಿ ಮತ್ತು ಎರಡನೆಯ ವರದಿಗೆ ಯಾಕೆ ವ್ಯತ್ಯಾಸ ಬಂದಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಈಗ ಅವರನ್ನು ಮನೆಗೆ ಕಳುಹಿಸಿದ್ದು, ಅವರನ್ನು14 ದಿನಗಳ ಕಾಲ ಕಡ್ಡಾಯ ಹೋಂ ಕ್ವಾರಂಟೈನ್ ಗೆ ಕಳಿಸಲಾಗಿದೆ.