ಸುಳ್ಯ | ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷ, ಕಾರ್ಯದರ್ಶಿಗಳ ಘೋಷಣೆ

ಭಾರತೀಯ ಜನತಾ ಪಾರ್ಟಿ- ಸುಳ್ಯ ಮಂಡಲದಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ, ವಿವಿಧ ಮೋರ್ಚಾಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿಯವರು ಘೋಷಿಸಿದ್ದಾರೆ.
ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಶ್ರೀಮತಿ ಶುಭದಾ ಎಸ್. ರೈ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಎಸ್. ಸಿ. ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಅಚ್ಚುತ ಗುತ್ತಿಗಾರು ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ವಿಜಯ ಆಲಡ್ಕ, ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಐತ್ತಪ್ಪ ನಾಯ್ಕ ಚೊಕ್ಕಾಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಪೂವಪ್ಪ ನಾಯ್ಕ ಶಾಂತಿಗುರಿ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಚಂದ್ರಶೇಖರ ಪನ್ನೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ನವೀನ್ ಸಾರಕೆರೆ ಮತ್ತು ರೈತ ಮೋರ್ಚಾದ ಅಧ್ಯಕ್ಷರಾಗಿ ಶ್ರೀ ರಮೇಶ್ ಕಲ್ಪುರೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಕೆ.ಪಿ.ಗಿರಿಧರ್ ಕೊಲ್ಲಮೊಗ್ರು ಆಯ್ಕೆಯಾಗಿರುತ್ತಾರೆ.

Leave A Reply

Your email address will not be published.