ಕಡಬ ತಾಲೂಕಿಗೂ ಕಾಲಿಟ್ಟ ಮಿಡತೆಗಳ ಹಿಂಡು
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರ ತೋಟದಲ್ಲಿ ಮಿಡತೆಗಳ ಗುಂಪು ಇರುವುದು ಪತ್ತೆಯಾಗಿದೆ.
ರೆಂಜಿಲಾಡಿಯ ವಿಶ್ವನಾಥ ಎಂಬವರ ತೋಟದಲ್ಲಿ ಗುಂಪಾಗಿ ಆಗಮಿಸಿದ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ.
ಈಗಾಗಲೇ ನೆರೆಯ ಪಾಕಿಸ್ತಾನದಿಂದ ಬಂದಿರುವ ಮರುಭೂಮಿ ರಕ್ಕಸ ಮಿಡತೆಗಳು ಉತ್ತರ ಭಾರತದ ಒಂದೊಂದೇ ರಾಜ್ಯಗಳಿಗೆ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿವೆ. ಈಗಾಗಲೇ 7 ರಾಜ್ಯಗಳಲ್ಲಿ ತನ್ನ ಹಾವಳಿ ಪ್ರಾರಂಭಿಸಿರುವ ಮಿಡತೆಗಳು ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಮುತ್ತಿಗೆ ಹಾಕಿವೆ.
ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು ಮುಂದಿನ ದಿನಗಳಲ್ಲಿ ಮಿಡತೆಗಳು ದಕ್ಷಿಣ ಭಾರತದ ರಾಜ್ಯಗಳಿಗೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ.