ಉತ್ತರ ಭಾರತದಲ್ಲಿ ಮಾರಕ ಮಿಡತೆಗಳ ಕಾಟ ಉಲ್ಬಣ | ಕರುನಾಡ ರೈತರಲ್ಲಿ ಆತಂಕ

ಬೆಂಗಳೂರು: ಮಾರಕ ಕೊರೋನಾ ಜಗತ್ತಿನಾದ್ಯಂತ ಜೀವವೈವಿಧ್ಯದ ಜೀವ ಹೆಂಡತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕರುನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕೆಂಗಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಕಷ್ಟಪಡುವಂತಾಗಿದೆ.

ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು ಮುಂದಿನ ದಿನಗಳಲ್ಲಿ ಮಿಡತೆಗಳು ದಕ್ಷಿಣ ಭಾರತದ ರಾಜ್ಯಗಳಿಗೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ.

ಮರುಭೂಮಿಯ ಗಡಿ ಪ್ರದೇಶವಾಗಿರುವ ರಾಜಸ್ಥಾನ ರಾಜ್ಯವನ್ನು ಮೊದಲು ಪ್ರವೇಶಿಸಿದ ಕೃಷಿ ಕಂಟಕ ಮಿಡತೆಗಳು ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಕೃಷಿಗೆ ಹಾನಿ ಮಾಡಿದೆ.

ಮಿಡತೆಗಳು ಹಿಂಡುಹಿಂಡಾಗಿ ಹೆಚ್ಚಿನ ಸಂಖ್ಯೆಗಳಲ್ಲಿ ಆಹಾರ ಬೆಳೆಗಳ ಗದ್ದೆಗಳಿಗೆ ಹಾನಿ ಮಾಡುತ್ತಿದ್ದು ರೈತರು ಸಂಪೂರ್ಣ ಹಾನಿಯ ಆತಂಕ ಎದುರಿಸುತ್ತಿದ್ದಾರೆ.

ಮರುಭೂಮಿ ಮಿಡತೆಗಳು ಬಹುಭಕ್ಷಕ ಕೀಟಗಳು. ಯಾವುದೇ ಗಿಡ ಅಥವಾ ಬೆಳೆಯ ಎಲೆ, ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ಭಕ್ಷಿಸುತ್ತವೆ.

ಪ್ರಪಂಚದಲ್ಲಿ ಮಿಡತೆಗಳಲ್ಲಿ 10 ಪ್ರಭೇಧಗಳಿವೆ. ಭಾರತದಲ್ಲಿ ನಾಲ್ಕು ಪ್ರಭೇದಗಳನ್ನು ಕಾಣಬಹುದಾಗಿದೆ. ಈ ಮಿಡತೆಗಳ ಪೈಕಿ ಹೆಣ್ಣು ಮಿಡತೆಯು ತೇವಾಂಶ ಹೊಂದಿರುವ ಮರಳು ಮಿಶ್ರಿತ ಮಣ್ಣಿನಲ್ಲಿ ಮೊಟ್ಟೆ ಇಡುತ್ತದೆ.

ತನ್ನ ಜೀವಾವಧಿಯಲ್ಲಿ ವಾರಕ್ಕೊಮ್ಮೆ 1000 ಮೊಟ್ಟೆಗಳನ್ನು ಪ್ರತಿ ಚದುರ ಅಡಿಗೆ ಇಡುತ್ತಿದ್ದು, 3 ಸಲ ಈ ಆವೃತ್ತಿ ಇರುತ್ತದೆ. ಪ್ರಭುದ್ಧ ಹೊಂದಿದ ಮಿಡತೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ 12 ರಿಂದ 16 ಕಿ. ಮೀ. ವೇಗದಲ್ಲಿ ಹಾರಾಟ ನಡೆಸುತ್ತವೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳು ಮಿಡತೆ ಹಾವಳಿಯಿಂದ ರಕ್ಷಿಸಿಕೊಳ್ಳಲು ಸಿದ್ಧತೆ ನಡೆಸುತ್ತಿವೆಯಾದರು, ಇದರ ವ್ಯಾಪಕ ಹರಡುವಿಕೆಯನ್ನು ನೋಡಿದರೆ, ಇದನ್ನು ತಡೆಯುವುದು ಬಹುದೊಡ್ಡ ಸವಾಲು ಎನಿಸಿದೆ.

Leave A Reply

Your email address will not be published.