ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಿದ ರಾಜ್ಯ ಸರಕಾರ : ಸಚಿವ ಡಾ|ಕೆ.ಸುಧಾಕರ್ ಮಾಹಿತಿ

ಬೆಂಗಳೂರು : ಕೊರೊನಾ ಸೊಂಕಿತರ ವಿವರಣೆಗಳ ಮಧ್ಯಾಹ್ನ ಹೆಲ್ತ್ ಬುಲೆಟಿನ್ ನನ್ನು ರಾಜ್ಯ ಸರಕಾರ ಇಂದಿನಿಂದ ನಿಲ್ಲಿಸಿದೆ.

ಕೊರೊನಾ ಸೋಂಕಿತರು, ಗುಣಮುಖರಾದವರ ಬಗ್ಗೆ ಇಲ್ಲಿವರೆಗೂ ರಾಜ್ಯ ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿತ್ತು.

ಆದರೆ ಇಂದಿನಿಂದ ಸಂಜೆ ಮಾತ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಸುಧಾಕರ್, ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಹೀಗಾಗಿ ಇತರೆ ರಾಜ್ಯಗಳಂತೆಯೇ ಮಧ್ಯಾಹ್ನದ ಬುಲೆಟಿನ್ ಬಿಡುಗಡೆ ಮಾಡದಿರಲು ಟಾಸ್ಕ್ ಫೋರ್ಸ್ ನಿರ್ಧರಿಸಿದೆ.

Leave A Reply

Your email address will not be published.