ಅತ್ತಾವರ್ ನೇತೃತ್ವದ ರಾಮ್ ಸೇನಾ ಮುಖಂಡ ಭರತ್ ಶೆಟ್ಟಿ ಮುಂದಾಳತ್ವದಲ್ಲಿ ವಿವಾದಿತ ಯಲಹಂಕ ಮೇಲ್ಸೆತುವೆ ಉದ್ಘಾಟನೆ

ಬೆಂಗಳೂರು, ಮೇ 28 : ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ವೀರಸಾವರ್ಕರ್ ಹೆಸರಿಡಲು ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ ಸೇನಾ ವತಿಯಿಂದ ಇಂದು ನೆರವೇರಿಸಲಾಯಿತು.
ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಇದರ ಉದ್ಘಾಟನೆ ಆಗಬೇಕಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಒತ್ತಡ ಹೆಚ್ಚಾದ ಕಾರಣವೋ ಏನೋ ಸರ್ಕಾರದ ಕಡೆಯಿಂದ ಉದ್ಘಾಟನೆ ನಡೆಯಲಿಲ್ಲ.

ಆದರೆ ರಾಮ್ ಸೇನಾ ಕ್ರಾಂತಿವೀರ ವೀರಸಾವರ್ಕರ್ ಅವರ ಹುಟ್ಟು ಹಬ್ಬದ ದಿನ ರಾಮ್ ಸೇನಾ (ರಿ)ಕರ್ನಾಟಕ ವತಿಯಿಂದ ಇಂದು ಬೆಳಿಗ್ಗೆ ವೀರ ಸಾವರ್ಕರ್ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಬೆಂಗಳೂರು ಯಲಹಂಕ ಮೇಲ್ಸೇತುವೆಯ ಉದ್ಘಾಟನೆಯು ನೆರವೇರಿದೆ.

ರಾಮ್ ಸೇನಾದ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ರವರ ಗರಡಿಯಲ್ಲಿ ಪಳಗಿದ ಬೆಂಗಳೂರಿನ ರಾಮ್ ಸೇನಾ ಯುವ ಮುಖಂಡ, ಈ ಹಿಂದೆ ಮಂಗಳೂರಿನ ಪಬ್ ನಲ್ಲಿ ಅನೈತಿಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ ನಡೆದ ಪಬ್ ದಾಳಿಯಲ್ಲಿ ಭಾಗಿಯಾಗಿದ್ದ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಈ ಉದ್ಘಾಟನೆ ನೆರವೇರಿದೆ.

ವೀರ ಕ್ರಾಂತಿಕಾರಿ, ಅಪ್ಪಟ ದೇಶಭಕ್ತ ವೀರ ಸಾವರ್ಕರ್ ರವರಿಗೆ ಯಾವುದೇ ರೀತಿಯಲ್ಲಿ ಅವಮಾನವಾಗಲು ಬಿಡುವುದಿಲ್ಲವೆಂದು ರಾಮ್ ಸೇನಾ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.