ಸುಳ್ಯ | ವಿದ್ಯುತ್ ಬಿಲ್ ನಲ್ಲಿ ಗೊಂದಲ ನಿವಾರಣೆ ಹಾಗೂ ವಿದ್ಯುತ್ ಬಿಲ್ ರಿಯಾಯಿತಿ | ಆಮ್ ಆದ್ಮಿ ಪಕ್ಷದಿಂದ ಹೋರಾಟಕ್ಕೆ ಚಿಂತನೆ
ಕರೋನಾ ವೈರಸ್ಸಿನ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಜನತೆಗೆ ರಾಜ್ಯ ಸರ್ಕಾರವು ಕಳೆದ ತಿಂಗಳ ಹಿಂದೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದರು. ಆದರೆ ಈ ಬಾರಿಯ ಬಿಲ್ಲಿನಲ್ಲಿ ಪಾವತಿಸಬೇಕಾದ ಮೊತ್ತ ದುಪ್ಪಟ್ಟಾಗಿ ಬಂದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಸುಳ್ಯ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಮೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ ಕಳೆದ ಎರಡು ತಿಂಗಳುಗಳ ವಿದ್ಯುತ್ ಬಿಲ್ಲಿನಲ್ಲಿ ಯಾವುದೇ ಲೋಪದೋಷಗಳು ನಡೆದಿರುವುದಿಲ್ಲ ಗ್ರಾಹಕರು ಬಳಸಿದ ಯೂನಿಟ್ ಅಂದಾಜು ಆಧಾರ ಕಡಿಮೆಯಾಗಿರುವುದರಿಂದ ಮತ್ತು ಹೆಚ್ಚಿನ ಬಳಕೆಗೆ ಸ್ಲಾಬ್ ಪ್ರಕಾರ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಬಡ್ಡಿ ಮತ್ತು ಇತರ ಶುಲ್ಕಗಳನ್ನು ನಿಯಮಾನುಸಾರವಾಗಿ ಸೇರಿಸಲಾಗಿದೆ.
ಅಲ್ಲದೆ ಬಿಲ್ ಪಾವತಿಗೆ ಜೂನ್ 30ರ ತನಕ ಕಾಲಾವಕಾಶವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಈ ರೀತಿಯ ಸ್ಪಷ್ಟೀಕರಣ ದಿಂದ ಈಗಾಗಲೇ ಮಹಾಮಾರಿ ಕೊರೋನಾದ
ಆತಂಕದಲ್ಲಿ ಜೀವನೋಪಾಯಕ್ಕೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು,ಪ್ರತಿ ತಿಂಗಳು ಪಾವತಿಸುವ ಬಿಲ್ ಇದೀಗ ದುಪ್ಪಟ್ಟಾಗಿ ಬರುತ್ತಿದ್ದು ಸಮಸ್ಯೆ ಇನ್ನೂ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಈ ವಿಷಯದ ಕುರಿತು ಚರ್ಚಿಸಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಿಎಂ ಶಾರಿಖ್, ರಶೀದ್ ಜಟ್ಟಿಪಳ್ಳ ,ಇಕ್ಬಾಲ್ ಬೆಳ್ಳಾರೆ, ಕಲಂದರ್ ಶಾಫಿ, ಈಶಾಕ್ ಆದರ್ಶ ಮೊದಲಾದವರು ಉಪಸ್ಥಿತರಿದ್ದರು.