ಅಂತರ್ ರಾಜ್ಯ ಗಡಿಯಲ್ಲಿ ನೋ ಎಂಟ್ರಿ | ಚೆಕ್ ಪೋಸ್ಟ್ ನಲ್ಲೇ ನಡೆಯಿತು ಮದುವೆ ! ಪತಿಯ ಮನೆ ಸೇರಿದಳಾ ಸತಿ….?!
ಇಡುಕ್ಕಿ: ಅಂತರ ರಾಜ್ಯ ಪ್ರವೇಶ ನಿರ್ಬಂಧ ಇರುವ ಕಾರಣ ಕೇರಳ ಮೂಲದ ಹುಡುಗಿ ಮತ್ತು ತಮಿಳುನಾಡು ಮೂಲದ ಯುವಕನ ಮದುವೆ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲೇ ನಡೆದ ಘಟನೆ ಕೇರಳದಿಂದ ವರದಿಯಾಗಿದೆ.
ಅಲ್ಲಿದ್ದ ಪೊಲೀಸರು, ಅಧಿಕಾರಿಗಳೇ ಇವರಿಬ್ಬರ ಮದುವೆಗೆ ಸಾಕ್ಷಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.
ತಮಿಳುನಾಡಿನ ಥೇನಿ ಜಿಲ್ಲೆಯ ಕುಂಬಮ್ ಮೂಲದ ಪ್ರಶಾಂತ್ ಮತ್ತು ಕೇರಳದ ಕೊಟ್ಟಾಯಂನ ಗಾಯತ್ರಿ ವಿವಾಹ ಮೇ 25ರ ಬೆಳಗ್ಗೆ ಕೇರಳದ ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್ ವಲರಾಡಿನ ದೇವಸ್ಥಾನದಲ್ಲಿ ನಿಗದಿಯಾಗಿತ್ತು. ಹೀಗಾಗಿ, ಗಡಿಯ ಸಮೀಪ ವಾಸವಾಗಿದ್ದ ವರ ಪ್ರಶಾಂತ್ ಮತ್ತು ಸಂಬಂಧಿಕರು ವಾಹನದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡು ಗಡಿ ಬಂದ್ ಮಾಡಲಾಗಿದ್ದು, ಪ್ರಶಾಂತ್ ಬಳಿ ಕೇರಳ ಪ್ರವೇಶಿಸುವ ಇ ಪಾಸ್ ಕೂಡಾ ಇರಲಿಲ್ಲ. ಹೀಗಾಗಿ, ಕುಮಿಲಿ ಗಡಿ ಚೆಕ್‌ಪೋಸ್ಟ್‌ನಲ್ಲೇ ಕೇರಳ ರಾಜ್ಯ ಪೊಲೀಸರು ವರ ಪ್ರಶಾಂತ್ ಮತ್ತು ಅವರ ಕುಟುಂಬವನ್ನು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲ.
ಈ ವಿಷಯ ಗೊತ್ತಾಗುತ್ತಿದ್ದಂತೆಯೇ ವಧು ಸೇರಿ ಕುಟುಂಬಸ್ಥರು ಚೆಕ್‌ಪೋಸ್ಟಿಗೆ ಬಂದು ಪೊಲೀಸರ ಮನವೊಲಿಸಲು ಯತ್ನಿಸಿದ್ದರು. ಆದರೆ, ಸೂಕ್ತ ಪಾಸ್ ಇಲ್ಲದೆ ಪೊಲೀಸರಿಗೂ ಇವರನ್ನು ಗಡಿ ಪ್ರವೇಶಿಸಲು ಬಿಡುವ ಅವಕಾಶ ಇರಲಿಲ್ಲ. ಹೀಗಾಗಿ ಅಧಿಕಾರಿಗಳು ಕೂಡಾ ಸಂದಿಗ್ನತೆಗೆ ಸಿಲುಕಿದರು.