ಮೋಟಾರ್ ವಾಹನಗಳ ದಾಖಲೆಯ ಅವಧಿ ಮುಗಿದರೆ ಚಿಂತೆ ಬೇಡ | ಇಲ್ಲಿದೆ ಬಹು ಮುಖ್ಯ ಮಾಹಿತಿ

Share the Article

ಸುಳ್ಯ: 2020 ರ ಫೆಬ್ರವರಿ 1 ರಿಂದ ಬಾಕಿ ಇರುವ ಮೋಟಾರು ವಾಹನಗಳಿಗೆ ಸಂಬಂಧಿಸಿದ ಚಾಲನಾ ಪರವಾನಗಿ ಸಹಿತ ಎಲ್ಲಾ ದಾಖಲೆ ಪತ್ರಗಳ ಮಾನ್ಯತೆಯನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಅಲ್ಲದೇ ಅಲ್ಲಿಯವರೆಗೆ ನವೀಕರಣ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಇಲಾಖೆಗಳ ಕಾರ್ಯಾಚರಣೆ ಸ್ಥಗಿತಗೊಂಡ ಮತ್ತು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂದು ಕೇಂದ್ರ ಸಚಿವಾಲಯ ಈ ಆದೇಶ ನೀಡಿದೆ.

ಅದರಂತೆಯೇ ಫೆಬ್ರವರಿ 1 ಅಥವಾ ಅದರ ಬಳಿಕ ಇಲ್ಲಿಯವರೆಗೆ ಯಾವುದೇ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತಾ ಅವಧಿ ಮುಗಿದಿದ್ದರೆ ಅದು ಜುಲೈ 31 ರವರೆಗೆ ಮಾನ್ಯತೆಯಲ್ಲಿರುತ್ತದೆ ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಮಾಡಲಾಗುವ ಮಾನ್ಯತಾ ನವೀಕರಣಕ್ಕೆ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Leave A Reply

Your email address will not be published.