ಎಲ್ಲಿತ್ತು ಹೇಗಿತ್ತು ?| ಕೃಷ್ಣನಗರಿ ಉಡುಪಿಗೆ ಕೊರೊನಾಘಾತ | ಒಂದೇ ದಿನ 32 ದೃಢ

ಕೊರೊನಾ ವೈರಸ್ ಸೋಂಕು ಕೃಷ್ಣನಗರಿ ಉಡುಪಿಗೆ ದೊಡ್ಡ ಶಾಕ್ ಕೊಟ್ಟಿದೆ. ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಮೇ.25 ಕ್ಕೆ ಸೋಂಕಿತರ ಸಂಖ್ಯೆ 108 ತಲುಪಿದೆ.

ಕೊರೋನಾ ರಾಜ್ಯದಲ್ಲಿ ಪತ್ತೆಯಾದ ಸಮಯದಲ್ಲಿ ಒಂದೇ ಪ್ರಕರಣ ಇದ್ದ ಉಡುಪಿಯಲ್ಲಿ ಈಗ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಪಕ್ಕದ ಜಿಲ್ಲೆ ದ.ಕ.ದಲ್ಲಿ ಕೊರೋನಾ ಮೇರೆ ಮೀರುತ್ತಿದ್ದ ಸಂದರ್ಭದಲ್ಲೂ ಉಡುಪಿಯಲ್ಲಿ ಯಾವುದೇ ಪ್ರಕರಣ ಇರಲಿಲ್ಲ. ಆದರೆ ಈಗ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಜಿಲ್ಲೆಯ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇಂದು ಮೇ 25 ರ ಬೆಳಗ್ಗೆ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರೆ, ಸಂಜೆ ಮತ್ತೆ 16 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಂದೇ ದಿನ 32 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.