ಕೊರೋನಾ ಸೋಂಕಿತ ವಿಟ್ಲದ ಹೆಡ್‌ಕಾನ್‌ಸ್ಟೇಬಲ್ ಜತೆ ಸಂಪ್ಯ ಪೊಲೀಸ್ ಠಾಣಾ ಸಿಬ್ಬಂದಿ ಸಂಪರ್ಕ | ಕ್ವಾರಂಟೈನ್

ಪುತ್ತೂರು: ಕೊರೋನಾ ಸೋಂಕು ಧೃಢಪಟ್ಟಿರುವ ವಿಟ್ಲ ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ ಸಂಪ್ಯ ಪೊಲೀಸ್ ಠಾಣಾ ಸಿಬ್ಬಂದಿಯೋರ್ವರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ವಿಟ್ಲ ಠಾಣಾ ಹೆಡ್‌ಕಾನ್‌ಸ್ಟೇಬಲ್ ಅವರು ಕಾರ್ಯ ನಿಮಿತ್ತ ಸಂಪ್ಯ ಠಾಣಾ ವ್ಯಾಪ್ತಿಗೆ ಬಂದಿದ್ದ ವೇಳೆ ಸಂಪ್ಯ ಠಾಣಾ ಸಿಬ್ಬಂದಿ ಅವರ ಜೊತೆ ಹೋಗಿದ್ದರು. ಇದೀಗ ವಿಟ್ಲ ಠಾಣಾ ಹೆಡ್‌ಕಾನ್‌ಸ್ಟೇಬಲ್ ಅವರಿಗೆ ಮಹಾರಾಷ್ಟ್ರದಿಂದ ಬಂದಿದ್ದ ಕರೋಪಾಡಿಯ ಯುವಕನ ಸಂಪರ್ಕದಿಂದ ಕೊರೋನಾ ಸೋಂಕು ಹರಡಿರುವುದು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಹೆಡ್ ಕಾನಾಸ್ಟೇಬಲ್ ಜೊತೆ ಸಂಪರ್ಕ ಸಾಧಿಸಿದ್ದ ಸಂಪ್ಯ ಠಾಣಾ ಪೊಲೀಸ್ ಸಿಬ್ಬಂದಿಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ವಿಟ್ಲ ಠಾಣಾ ಹೆಡ್ ಕಾನ್‌ಸ್ಟೇಬಲ್ ಅವರು ಸಂಪ್ಯ ಪೊಲೀಸ್ ಠಾಣೆಗೆ ಬಂದಿಲ್ಲ ಎನ್ನಲಾಗುತ್ತಿದ್ದು ಯಾವುದೋ ಕ್ರೈಂ ವಿಚಾರಕ್ಕೆ ಸಂಬಂಧಪಟ್ಟು ಠಾಣಾ ವ್ಯಾಪ್ತಿಗಷ್ಟೇ ಬಂದಿದ್ದು ಈ ವೇಳೆ ಸಂಪ್ಯ ಪೊಲೀಸರ ಜೊತೆ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದೆ. ಸಂಪ್ಯ ಠಾಣೆಯ ಓರ್ವ ಸಿಬ್ಬಂದಿ ಜೊತೆ ಸಂಪರ್ಕ ಸಾಧಿಸಿದ್ದು ಧೃಢವಾಗಿದ್ದು ಇನ್ನೂ ಇತರ ಪೊಲೀಸ್ ಸಿಬ್ಬಂದಿಗಳ ಜತೆ ಸಂಪರ್ಕ ಸಾಧಿಸಿದ್ದರೇ ಎನ್ನುವ ಆತಂಕ ಮತ್ತು ಪ್ರಶ್ನೆ ಇದೀಗ ಎದುರಾಗಿದೆ.

Leave A Reply

Your email address will not be published.