ಬಳ್ಪ | ತ್ರಿಶೂಲಿನೀ ದೇವಳದ ವತಿಯಿಂದ ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ

ಕೊರೊನ ರೋಗ ಬಾಧಿಸುತ್ತಿರುವ ಈ ಸಂಧರ್ಭದಲ್ಲಿ ಸ್ವ ಆರೋಗ್ಯ ರಕ್ಷಣೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ನಿಟ್ಟಿನಲ್ಲಿ ಬಳ್ಪ ಶ್ರೀ ತ್ರಿಶೂಲಿನೀ ಅಮ್ಮನವರ ದೇವಾಲಯದ ವತಿಯಿಂದ ಬಳ್ಪ ಮತ್ತು ಕೇನ್ಯ ಗ್ರಾಮದ ಪ್ರತಿ ಮನೆಯ ಪ್ರತಿ ಸದಸ್ಯರಿಗೂ ಉಚಿತ ಮಾಸ್ಕ್ ದಾನಿಗಳ ನೆರವಿನಿಂದ ನೀಡುವುದೆಂದು ನಿರ್ಧರಿಸಲಾಗಿತ್ತು.ಆ ಪ್ರಯುಕ್ತ ಬಳ್ಪ ಗ್ರಾಮದ ಪ್ರತೀ ಮನೆಯ ಎಲ್ಲಾ ಸದಸ್ಯರಿಗೆ ಮಾಸ್ಕ್ ವಿತರಣೆ‌ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಪ್ರಕಾಶ ಮೂಡ್ನೂರು ನೆರವೇರಿಸಿದರು.ಈಗಾಗಲೇ ದಾನಿಗಳ ಮೂಲಕ ಸಂಗ್ರಹಿಸಿದ ಅಂದಾಜು ರೂ. 9೦೦೦೦ ವೆಚ್ಚದಲ್ಲಿ ಒಟ್ಟು 5೦೦೦ ಮಾಸ್ಕ್‌ಗಳನ್ನು ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ರೈ ಅರ್ಗುಡಿ, ಗೌರವಾಧ್ಯಕ್ಷ ಭಾಸ್ಕರ ಪಂಡಿ, ದೇವಳದ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಉತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಸಂಚಾಲಕರು, ಸದಸ್ಯರು, ಊರವರು ಉಪಸ್ಥಿತರಿದ್ದರು.

Leave A Reply

Your email address will not be published.