ದ‌.ಕ.| ಬೆಂಬಿಡದ ಕೊರೊನಾತಂಕ| ಇಂದೂ ಪತ್ತೆಯಾಗಿದೆ ಪಾಸಿಟಿವ್ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 4 ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಸದ್ಯ ಇವರಿಗೆ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ.

ಮಾಹಿತಿ ನೀಡಲು ಹಿಂದೇಟು?

ಅಂತರಾಜ್ಯದಿಂದ ಬಂದವರನ್ನು ನೇರವಾಗಿ ಜಿಲ್ಲಾಡಳಿತ,ತಾಲೂಕು ಆಡಳಿತ, ಗ್ರಾ.ಪಂ.ಮಾಡಿರುವ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ.ಆದರೆ ಕೆಲವೆಡೆ ಮಾಹಿತಿ ನೀಡದೇ ಹಾಗೂ ಹೆದ್ದಾರಿಯಲ್ಲಿ ಕಣ್ಣು ತಪ್ಪಿಸಿ ಒಳ ದಾರಿಯಿಂದ ಬರುವ ಕುರಿತು ಕೆಲವೆಡೆ ಮಾಹಿತಿ ದೊರಕುತ್ತಿದೆ.

ಕೊರೊನಾ ಯಾವ ರೀತಿಯಲ್ಲೂ ಹಬ್ಬ ಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ.ಆದರೂ ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬಂದವರು ಸ್ವತಃ ಮಾಹಿತಿ ನೀಡುವುದು ಕರ್ತವ್ಯ, ಅದರೂ ಕೆಲವೆಡೆ ಮಾಹಿತಿ ನೀಡದೆ‌ ಇತರರಿಗೂ ಕಂಟಕ ಪ್ರಾಯವಾಗುತ್ತಿರುವುದು ಖೇದಕರ.

ಹೊರಜಿಲ್ಲೆಯಿಂದ ಬರುವವರು ತಮ್ಮ ಮನಯಲ್ಲೇ‌ ಕ್ವಾರಂಟೈನ್ ಮಾಡಿಕೊಳ್ಳಬೇಕು.ಅಲ್ಲದೆ ಆರೋಗ್ಯ ಇಲಾಖೆಯ ಗಮನಕ್ಕೆ ಖುದ್ದಾಗಿ ಅವರೇ ಮಾಹಿತಿ ನೀಡಬೇಕಿದೆ.

ಎಲ್ಲರ ಹೋರಾಟ ಕೊರೊನಾ ವಿರುದ್ದವೇ ಹೊರತು ರೋಗಿಯ ವಿರುದ್ಧ ಅಲ್ಲ.ಜನತೆ ಜಾಗೃತರಾಗಬೇಕಿದೆ.

ರಾಜ್ಯದಲ್ಲಿ ಇಂದು 69 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.

ಇದರಲ್ಲಿ 680 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 53 ಜನ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Leave A Reply

Your email address will not be published.