ಬ್ರಹ್ಮಾವರ ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ಕೊರೊನಾ ಪಾಸಿಟಿವ್ | ಮೂರು ಠಾಣೆಗಳು ಸೀಲ್ ಡೌನ್

ಉಡುಪಿ, ಮೇ 24. ಕಾರ್ಕಳ ಗ್ರಾಮಾಂತರ, ಅಜೆಕಾರು ಮತ್ತು ಬ್ರಹ್ಮಾವರ ಪೋಲಿಸ್ ಠಾಣೆಯ ಮೂರು ಜನ ಪೋಲಿಸ್ ಪೇದೆಗಳಲ್ಲಿ ಕೊರೋನ ಸೊಂಕಿರುವುದು ದೃಡ ಪಟ್ಟಿದೆ.
ಈ ಮೂರು ಠಾಣೆಗಳ ಎಲ್ಲಾ ಅಧಿಕಾರಿಗಳನ್ನು ಮತ್ತು ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಇತರ ಸಿಬ್ಬಂದಿಗಳನ್ನು ಕ್ವಾರಂಟೈನಲ್ಲಿ ಇಡಲಾಗಿದೆ. ಸದ್ಯ ಈ ಮೂರು ಠಾಣಾವ್ಯಾಪ್ತಿ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ಕಾರ್ಕಳ ಅಜೆಕಾರು ಸೇರಿದಂತೆ ಕಾರ್ಕಳ ನಗರ ಹಾಗೂ ವೃತ್ತ ನಿರೀಕ್ಷಕರ ಕಛೇರಿಯನ್ನು ಮುಚ್ಚಲಾಗಿದೆ. ಕಟ್ಟಡಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದ ಬಳಿಕವಷ್ಟೆ ಮತ್ತೆ ಈ ಠಾಣೆಗಳು ಕಾರ್ಯರಾಂಭಿಸಲಿವೆ.

 

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 130 ಜನರಲ್ಲಿ ಸೋಂಕು ದೃಢವಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 2089ಕ್ಕೆ ಏರಿದೆ.

Leave A Reply

Your email address will not be published.