ಬೆಳ್ತಂಗಡಿಯಲ್ಲಿ 20 ವರ್ಷಗಳ ಕಾಲ ಜಿ. ಪಂ. ಸಹಾಯಕ ಇಂಜಿನಿಯರ್ ಆಗಿದ್ದ ಪ್ರಭಾಚಂದ್ರ ಜೈನ್ ನಿಧನ

ಬೆಳ್ತಂಗಡಿ: ಪ್ರಭಾಚಂದ್ರ ಜೈನ್ ಅವರು ಬೆಳ್ತಂಗಡಿ ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸುಮಾರು 20 ವಷ೯ಗಳ ಕಾಲ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, ಶ್ರೀಯುತರು ಮೇ 21ರಂದು ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.

ಮೃತರಿಗೆ 55 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಬಂಟ್ವಾಳ ತಾಲೂಕು ಸಿದ್ದಕಟ್ಟೆ ಶಾಂತಿರಾಜ್ ಜೈನ್ ಅವರ ಪುತ್ರರಾದ ಇವರು 1988ರಲ್ಲಿ ಬೆಳ್ತಂಗಡಿ ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗಕ್ಕೆ ಉದ್ಯೋಗಕ್ಕೆ ಸೇರಿ 20 ವಷ೯ಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ಅವರಿಗೆ ಸಹಾಯಕ ಕಾಯ೯ನಿವ೯ಹಕ ಇಂಜಿನಿಯರ್ ಆಗಿ ಭಡ್ತಿಯಾಗಿ ತುಮಕೂರಿಗೆ ವಗಾ೯ವಣೆ ಗೊಂಡರೂ ಅಸೌಖ್ಯದ ಹಿನ್ನಲೆಯಲ್ಲಿ ಹೋಗಿರಲಿಲ್ಲ.

ಮೃತರು ಪತ್ನಿ, ಓವ೯ ಪುತ್ರಿ, ಓವ೯ ಪುತ್ರನನ್ನು ಅಗಲಿದ್ದಾರೆ.

Leave A Reply

Your email address will not be published.