ಉಡುಪಿ | ಕೊರೋನ ಕ್ವಾರಂಟೈನ್ ನಲ್ಲಿದ್ದ ವಿವಾಹಿತೆ ‘ ಕರೋನಾ ಪ್ಯಾರ್ ಹೈ ‘ ಅಂದ ಪ್ರಿಯಕರನ ಜತೆ ಪರಾರಿ
ಕಾರ್ಕಳ : ವಿಶ್ವವೇ ಕೊರೋನಾಗೆ ಹೆದರಿ ಅದರ ವಿರುದ್ಧ ಹೋರಾಡಲು ದಾರಿ ಕಂಡುಕೊಳ್ಳುತ್ತಿದ್ದರೆ ಇಲ್ಲೊಬ್ಬ ಮಹಿಳೆ ಹೋಂ ಕ್ವಾರಂಟೈನ್ ಮುಗಿಯುತ್ತಿದ್ದಂತೆ ತನ್ನ ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಿಂದ ವರದಿಯಾಗಿದೆ.
ಅಜೆಕಾರು ಕೈಕಂಬ ನಿವಾಸಿ ಮುಬೀನಾ (28) ಎಂಬುವರು ಪರಾರಿಯಾದ ಮಹಿಳೆ. ಮಂಗಳೂರಿಗೆ ಮದುವೆಗೆ ಹೋದ ಕಾರಣಕ್ಕೆ ಈ ಮಹಿಳೆಯನ್ನು ತನ್ನ ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಮಾಡಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ಈಕೆ ತನ್ನ ಹಳೇ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ನಾಪತ್ತೆಯಾದ ಮುಬೀನಾ 8 ವರ್ಷದ ಹಿಂದೆ ಉದ್ಯಾವರದ ಸಾಜಿದ್ ಎಂಬುವವನೊಂದಿಗೆ ಮದುವೆಯಾಗಿ ಪುಣೆಯ ಲೋನವಾಲದಲ್ಲಿ ನೆಲೆಸಿದ್ದರು. ಕಳೆದ 4 ತಿಂಗಳ ಹಿಂದೆ ಗಂಡನೊಂದಿಗೆ ಆಸೆಗೆ ಸರಿ ಹೋಗಿರಲಿಲ್ಲ. ಆ ಕಾರಣದಿಂದ ಆಕೆ 8 ವರ್ಷದ ಮಗಳೊಂದಿಗೆ ವಾಪಸ್ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದಳು. ಬಳಿಕ ಕೊರೋನಾ ಲಾಕ್ಡೌನ್ ಘೋಷಣೆಯಾಗಿದ್ದು ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮಕದಲ್ಲಿ ಭಾಗವಹಿಸಿ, ಊರಿಗೆ ಬಂದಾಗ ಕ್ವಾರಂಟೈನ್ ನ ಬಂಧನಕ್ಕೆ ಒಳಗಾಗಿದ್ದಾಳೆ.
ಈ ನಡುವೆ ತನ್ನ ಹಳೆಯ ಪ್ರಿಯಕರನ ಜತೆ ಆಕೆ ನಿರಂತರ ಸಂಪರ್ಕದಲ್ಲಿದ್ದಳು. ಆತ ಕರೋನ ಪ್ಯಾರ್ ಹೈ ಅಂದಿದ್ದಾನೆ. ಪ್ಯಾರ್ ಕಿಯಾ ತೋ ಢರ್ ನಾ ಕ್ಯಾ ಅಂತ ಕೂಡಾ ಪುಸಲಾಯಿಸಿದ್ದಾನೆ. ಮೊದಲು ” ನಕ್ಕೋ ನಕ್ಕೋ ” ಅಂದವಳು, ಕೊನೆಗೆ ನಕ್ಕು ಬಿಟ್ಟು ಮಗುವನ್ನೂ ಮನೆಯಲ್ಲೇ ಬಿಟ್ಟು ಪ್ರಿಯಕರನ ಹಿಂದೆ ಹೋಗಿದ್ದಾಳೆ.
ಇತ್ತ ಕೊರೋನಾದ ಬಗ್ಗೆಯೇ ಚಿಂತೆಯಲ್ಲಿದ್ದ ಮನೆಯವರಿಗೆ ಇವರ ‘ ಕರೋನಾ ಪ್ಯಾರ್ ಹೈ’ ಬಗ್ಗೆ ತಿಳಿದಿರಲಿಲ್ಲ. ಮುಬೀನಾ ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದಾಗ, ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿ ಪೊಲೀಸರು ಕಥೆ ಚಿತ್ರಕತೆ ಹೇಳಿದಾಗಲೇ ಮುಬೀನಾಳ ಕಥೆ ಬಿಚ್ಚಿಕೊಂಡದ್ದು. ಆಕೆ ತನ್ನ ಪ್ರಿಯಕರನ ಜತೆ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಒಳ್ಳೆಯ ಪ್ರೇಮ ಕಥೆ.
ಇನ್ನೊಂದು ತಾಜ್ ಮಹಲ್ ಗೆ ಪ್ರೇರಣೆ ಆಗಬಹುದು?